‘ಶೋಲೆ’ ಖ್ಯಾತಿಯ ಕಾಮಿಡಿಯನ್ ಜಗದೀಪ್ ನಿಧನ

'ಶೋಲೆ' ಸಿನಿಮಾದಲ್ಲಿನ ಸೂರ್ಮಾ ಭೋಪಾಲಿ ಪಾತ್ರದ ಮೂಲಕ ನಟ ಜಗದೀಪ್‌ ಖ್ಯಾತರಾಗಿದ್ದರು.

‘ಹಮ್ ಪಂಚಿ ಏಕ್ ದಾಲ್ ಕೆ’ ಚಿತ್ರದ ಅಭಿನಯಕ್ಕಾಗಿ ಜಗದೀಪ್ ಅವರಿಗೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಒಂದು ಬೇಟನ್ ಕೊಡುಗೆಯಾಗಿ ನೀಡಿದ್ದರು.

ಕರಾವಳಿ ಕರ್ನಾಟಕ ವರದಿ
ಮುಂಬೈ: ಭಾರತೀಯ ಚಿತ್ರರಂಗದ ಹಿರಿಯ ನಟ, ಕಾಮಿಡಿಯನ್ ಜಗದೀಪ್(81)  ನಿಧನರಾಗಿದ್ದಾರೆ.

‘ಶೋಲೆ’ ಸಿನಿಮಾದಲ್ಲಿನ ಸೂರ್ಮಾ ಭೋಪಾಲಿ ಪಾತ್ರದ ಮೂಲಕ ನಟ ಜಗದೀಪ್‌ ಖ್ಯಾತರಾಗಿದ್ದರು. ‘ಹಮ್ ಪಂಚಿ ಏಕ್ ದಾಲ್ ಕೆ’ ಚಿತ್ರದ ಅಭಿನಯಕ್ಕಾಗಿ ಜಗದೀಪ್ ಅವರಿಗೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಒಂದು ಬೇಟನ್ ಕೊಡುಗೆಯಾಗಿ ನೀಡಿದ್ದರು.

ವಯೋಸಹಜ ಅನಾರೋಗ್ಯದಿಂದ ಬಾಂದ್ರಾದ ತಮ್ಮ ನಿವಾಸದಲ್ಲಿ ಬುಧವಾರ ರಾತ್ರಿ8:30 ಸುಮಾರಿಗೆ ಮೃತಪಟ್ಟಿದ್ದಾರೆ.

ಜಗದೀಪ್‌ ಅವರ ಮೂಲ ಹೆಸರು ಸಯ್ಯದ್‌ ಇಷ್ತಿಯಾಕ್‌ ಅಹ್ಮದ್‌ ಜಫ್ರಿ.  ಬಿ. ಆರ್. ಛೋಪ್ರಾ ಅವರ ‘ಅಫ್ಸಾನಾ’ ಚಿತ್ರದಲ್ಲಿ ಬಾಲನಟರಾಗಿ ಚಿತ್ರರಂಗ ಪ್ರವೇಶಿಸಿದ್ದ ಜಗದೀಪ್ 60 ವರ್ಷ ಬಣ್ಣದ ಲೋಕದಲ್ಲಿದ್ದು, 400ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದರು.

ಗುರುದತ್ ಅವರ ‘ಆರ್ ಪಾರ್’, ಬಿಮಲ್ ರಾಯ್ ಅವರ ‘ದೊ ಬಿಘಾ ಜಮೀನ್’ ಚಿತ್ರಗಳಲ್ಲಿ ರಚಿಸಿದ್ದರು. ಶೋಲೆ ಸಿನಿಮಾದಲ್ಲಿ ಅವರಿಗೆ ಖ್ಯಾತಿ ಕೊಟ್ಟ ‘ಸೂರ್ಮ ಭೋಪಾಲಿ’ ಪಾತ್ರದ ಹೆಸರಲ್ಲೇ ಚಿತ್ರ ನಿರ್ಮಿಸಿದ್ದರು. ಬ್ರಹ್ಮಚಾರಿ, ಅಂದಾಜ್ ಅಪ್ನಾ ಅಪ್ನಾ ಸೇರಿದಂತೆ ಅಸಂಖ್ಯಾತ ಚಿತ್ರಗಳು ಅವರ ಹೆಸರನ್ನು ಭಾರತೀಯ ಚಿತ್ರರಂಗದಲ್ಲಿ ಚಿರಸ್ಥಾಯಿಯಾಗಿಸಿವೆ.

ಜಗದೀಪ್ ಪುತ್ರ ನಟ ಜಾವೇದ್‌ ಜಫ್ರಿ ಸೇರಿದಂತೆ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದೆ.

Get real time updates directly on you device, subscribe now.