ಮಂಗಳೂರು: ಮರ್ಹೂಂ ಎಂ.ಸಿ. ಇಸ್ಮಾಯಿಲ್ ಪ್ರಶಸ್ತಿ ವಿತರಣೆ

ಮಂಗಳೂರು: ಗಣರಾಜ್ಯೋತ್ಸವ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಮರ್ಹೂಂ ಎಂ.ಸಿ. ಇಸ್ಮಾಯೀಲ್ ಪ್ರಶಸ್ತಿ ವಿತರಣೆ ಮಾಡಲಾಯಿತು.

ಮಂಗಳೂರು: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈನೇಷನ್ ಆಫ್ ಇಂಡಿಯಾ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಭಾರತ್ ಸೋಶಿಯಲ್ ಆಂಡ್ ವೆಲ್ಫೇರ್ ಟ್ರಸ್ಟ್ ನ ಜಂಟಿ ಆಶ್ರಯದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಕಸ್ಬಾ ಬೆಂಗ್ರೆಯ ಏ.ಆರ್.ಕೆ. ಶಾಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮರ್ಹೂಂ ಎಂ.ಸಿ. ಇಸ್ಮಾಯೀಲ್ ಪ್ರಶಸ್ತಿಯನ್ನು ವಿತರಣೆ ಮಾಡಲಾಯಿತು.

 

ಈ ಸಂದರ್ಭದಲ್ಲಿ ಅತಿಥಿಯಾಗಿ ಮಾತನಾಡಿದ ಭಾರತ್ ಸೋಶಿಯಲ್ ಆಂಡ್ ವೆಲ್ಫೇರ್ ಟ್ರಸ್ಟ್ ನ ನೂರುಲ್ ಅಮೀನ್ ಕೆ.ಪಿ, ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ದೇಶದ ಪ್ರಜೆ ಎಂಬ ನೆಲೆಯಲ್ಲಿ ಪ್ರತಿಯೊಬ್ಬರೂ ಭೇದ ಭಾವ ಮರೆತು ಪರಸ್ಪರ ವಿಶ್ವಾಸದೊಂದಿಗೆ ಜೀವಿಸಿ, ದೇಶದ ಅಭಿವೃದ್ಧಿಗೆ ನಮ್ಮಿಂದಾದ ಕೊಡುಗೆ ನೀಡಬೇಕು. ಪ್ರತೀ ಪ್ರಜೆಯು ಸೇವಾ ಮನೋಭಾವವನ್ನು ಬೆಳೆಸಬೇಕು. ಸೇವೆಯು ಆತ್ಮ ಸಂತೃಪ್ತಿಗಿರುವ ದಾರಿ ಎಂದು ತಿಳಿಸಿದರು.

ವಿಜೇತರಿಗೆ ಮರ್ಹೂಂ ಎಂ.ಸಿ. ಇಸ್ಮಾಯೀಲ್ ರವರ ಪುತ್ರ ಎಂ.ಸಿ. ಅಶ್ರಫ್ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಎಸ್ ಐ ಓ ಜಿಲ್ಲಾ ಅಧ್ಯಕ್ಷ ಅಶೀರುದ್ದೀನ್ ಆಲಿಯಾ, ಏ.ಆರ್.ಕೆ. ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರಶೀದಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೈಫ್ ಉಳ್ಳಾಲ ಕಿರಾಅತ್ ಪಠಿಸಿದರು.

ಇದೇ ಸಂದರ್ಭದಲ್ಲಿ ಬಹುಮಾನ ಗಳಿಸಿದ ಸುಹಾನಾ ಸಫರ್, ನಿಹಾಲ್ ಕುದ್ರೋಳಿ, ಶ್ವೇತಾ, ಕೀರ್ತಿ, ಶಮೀನಾ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಎಸ್ ಐ ಓ ಜಿಲ್ಲಾ ಕಾರ್ಯದರ್ಶಿ ಅಹ್ಮದ್ ಮುಬೀನ್, ಎಸ್ ಐ ಓ ಬೆಂಗ್ರೆ ಅಧ್ಯಕ್ಷ ಅಝೀಝ್, ನಿಝಾಮ್ ಉಳ್ಳಾಲ, ರಾಝಿ ಬೆಂಗ್ರೆ ಸಹಕರಿಸಿದರು.

Get real time updates directly on you device, subscribe now.