ಬಂಟ್ವಾಳ: ಎಂ.ಬಿ.ಎ ವಿದ್ಯಾರ್ಥಿನಿ ಆತ್ಮಹತ್ಯೆ

ಪರೀಕ್ಷೆಯಲ್ಲಿ ಅಂಕಗಳಿಕೆ ಕಡಿಮೆಯಾಯಿತು ಎಂದು ಮನನೊಂದ ಎಂಬಿಎ ವಿದ್ಯಾರ್ಥಿನಿ

ಬಂಟ್ವಾಳ: ಪರೀಕ್ಷೆಯಲ್ಲಿ ಅಂಕಗಳಿಕೆ ಕಡಿಮೆಯಾಯಿತು ಎಂದು ಮನನೊಂದ ಎಂಬಿಎ ವಿದ್ಯಾರ್ಥಿನಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಕಳವಳಕಾರಿ ಘಟನೆ ಅಮ್ಟಾಡಿ ಮೇಲಿನ ಏರಿಯಾ ಎಂಬಲ್ಲಿ ನಡೆದಿದೆ.

ಪ್ರಥಮ ಎಂ.ಬಿ.ಎ. ವಿದ್ಯಾರ್ಥಿನಿ ರಕ್ಷಿತಾ( 23) ಮನೆಯ ಅಡುಗೆ ಕೋಣೆಯಲ್ಲಿ ಚೂಡಿದಾರ್ ಶಾಲು ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಮ್ಟಾಡಿಯ ಯಾದವ ಅವರ ಪುತ್ರಿ ರಕ್ಷಿತಾ ಎಂಬಿಎ ಓದುತ್ತಿದ್ದು, ಪ್ರಥಮ ಸೆಮಿಸ್ಟರ್ ನಲ್ಲಿ ಅಂಕ ಕಡಿಮೆಯಾಗಿದೆ ಎಂಬ ಕಾರಣಕ್ಕಾಗಿ ನೊಂದಿದ್ದರು ಎನ್ನಲಾಗಿದೆ. ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಪ್ರಕರಣ ದಾಖಲಿಸಿ ಕೊಂಡಿದ್ದಾರೆ

Get real time updates directly on you device, subscribe now.