ಉಳ್ಳಾಲ: ಡೆಂಗ್ಯು ಜ್ವರಕ್ಕೆ ವಿದ್ಯಾರ್ಥಿನಿ ಬಲಿ

ಉಳ್ಳಾಲ ಉಳಿಯ ನಿವಾಸಿ ಟೈಟಸ್ ಡಿಸೋಜ ಎಂಬವರ ಪುತ್ರಿ ಸ್ಟೆನಿಟಾ ಡಿಸೋಜ(15) ಮೃತ ವಿದ್ಯಾರ್ಥಿನಿ.

ಉಳ್ಳಾಲ: ಡೆಂಗ್ಯು ಜ್ವರಕ್ಕೆ ತುತ್ತಾದ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿದ್ದಾರೆ. ಉಳ್ಳಾಲ ಉಳಿಯ ನಿವಾಸಿ ವಿದ್ಯಾರ್ಥಿನಿ ಕಂಕನಾಡಿ ಫಾದರ್ ಮುಲ್ಲಸ್೯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ..

ಉಳ್ಳಾಲ ಉಳಿಯ ನಿವಾಸಿ ಟೈಟಸ್ ಡಿಸೋಜ ಎಂಬವರ ಪುತ್ರಿ ಸ್ಟೆನಿಟಾ ಡಿಸೋಜ(15) ಮೃತ ವಿದ್ಯಾರ್ಥಿನಿ. ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯಾಗಿದ್ದ ಈಕೆಯನ್ನು ಮಂಗಳೂರಿನ ಫಾದರ್ ಮುಲ್ಲಸ್೯ ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಅಲ್ಲಿ ಉಸಿರಾಟದ ಸಮಸ್ಯೆ ಉಂಟಾಗಿ ಎಂಟು ದಿನಗಳ ಕಾಲ ವೆಂಟಿಲೇಟರಿನಲ್ಲೇ ಇರಿಸಲಾಗಿತ್ತು. ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಶಿಕ್ಷಕ ಟೈಟಸ್ ಡಿಸೋಜ ದಂಪತಿಗೆ ಸ್ಟೆನಿಟಾ ಒಬ್ಬಳೇ ಪುತ್ರಿಯಾಗಿದ್ದಳು. ಅಂತಿಮ ಸಂಸ್ಕಾರ ನಾಳೆ ಎ.2 ರಂದು ತೊಕ್ಕೊಟ್ಟಿನಲ್ಲಿ ನಡೆಯಲಿದೆ.

Get real time updates directly on you device, subscribe now.