ಕೊರೋನಾ ಸೋಂಕಿತ ವಿಟ್ಲದ ವ್ಯಕ್ತಿ ಕುವೈಟ್‌ನಲ್ಲಿ ಸಾವು

ವಾರದ ಹಿಂದೆ ಕೊರೋನಾ ಸೋಂಕಿತರಾಗಿರುವುದು ಪತ್ತೆಯಾಗಿತ್ತು.

ಕುವೈಟ್‌ನಲ್ಲಿ ಚರ್ಚ್ ಧರ್ಮಗುರುಗಳ ಮಾರ್ಗದರ್ಶನದಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲಾಗಿದೆ

ಕರಾವಳಿ ಕರ್ನಾಟಕ ವರದಿ
ಬಂಟ್ವಾಳ: ಕುವೈಟ್‌ನಲ್ಲಿ ಉದ್ಯೋಗಿಯಾಗಿದ್ದ ವಿಟ್ಲ ಕಾಶಿಮಠದ ವ್ಯಕ್ತಿಯೋರ್ವರು ಕೊರೋನಾ ಸೋಂಕಿನಿಂದ ಕುವೈಟ್‌ನಲ್ಲಿ ಸಾವಪ್ಪಿದ್ದಾರೆ.

ಒಂದು ತಿಂಗಳಿನಿಂದ ಇವರು ಅಸ್ವಸ್ಥರಾಗಿದ್ದು, ವಾರದ ಹಿಂದೆ ಕೊರೋನಾ ಸೋಂಕಿತರಾಗಿರುವುದು ಪತ್ತೆಯಾಗಿತ್ತು. ಮೃತರು ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ.

ಕಳೆದ ವರ್ಷ ಮಗಳ ವಿವಾಹ ನೆರವೇರಿಸಿದ ಬಳಿಕ ವ್ಯಕ್ತಿ ಕುವೈಟ್‌ಗೆ ತೆರಳಿದ್ದರು.

ಕುವೈಟ್‌ನಲ್ಲಿ ಚರ್ಚ್ ಧರ್ಮಗುರುಗಳ ಮಾರ್ಗದರ್ಶನದಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲಾಗಿದೆ. ಊರಿನಲ್ಲಿ ಪ್ರಾರ್ಥನಾ ವಿಧಿಗಳನ್ನು ಮನೆಯಲ್ಲಿ ನೆರವೇರಿಸಲಾಗಿದೆ.

Get real time updates directly on you device, subscribe now.