‘ಬೀಟ್ ಪೊಲೀಸ್’ ವಾಟ್ಸ್ಯಾಪ್ ಗ್ರೂಪ್‌ನಲ್ಲಿ ಮುಸ್ಲಿಮರ ಅವಹೇಳನ: ಪಿಎಫ್‌ಐ ಖಂಡನೆ

ಅಪರಾಧ ಮುಕ್ತ ಸಮಾಜದ ದಿಸೆಯಲ್ಲಿ ಪೊಲೀಸರೇ ನಿರ್ವಹಿಸುವ ಬೀಟ್ ಪೊಲೀಸ್ ವಾಟ್ಸ್ಯಾಪ್ ಗ್ರೂಪ್

ಮುಸ್ಲಿಮರನ್ನು ನಿಂದಿಸುವ ಪ್ರಚೋದನಾತ್ಮಕ ಸಂದೇಶ ಕಳಿಸಿದ್ದರೂ ಪೊಲೀಸರು ಕ್ರಮಕೈಗೊಳ್ಳದೇ ನಿರ್ಲಕ್ಷ ತೋರಿದ್ದಾರೆ ಎಂದು ದೂರಲಾಗಿದೆ.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಅಪರಾಧ ಮುಕ್ತ ಸಮಾಜದ ದಿಸೆಯಲ್ಲಿ ಪೊಲೀಸರೇ ರಚಿಸಿ, ಪೊಲೀಸರೇ ನಿರ್ವಹಿಸುವ ಬೀಟ್ ಪೊಲೀಸ್ ವಾಟ್ಸ್ಯಾಪ್ ಗ್ರೂಪ್ ಒಂದರಲ್ಲಿ ಮುಸಿಮರನ್ನು ಅವಹೇಳಗೈದು ಸಂದೇಶ ರವಾನಿಸಿದ ಆರೋಪದ ಬಗ್ಗೆ ಮುಲ್ಕಿ ಪಿಎಫ್‌ಐ ಸದಸ್ಯ ರಾದ ಕಾರ್ನಾಡ್‌ನ ಮೊಹ್ಮದ್ ಹ್ಯಾರಿಸ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‘ಬೀಟ್ ಪೊಲೀಸ್ ನಂ.2’ ಗ್ರೂಪ್‌ನಲ್ಲಿ ಧನಂಜಯ ಪುತ್ರನ್ ಎಂಬವರು ಮುಸ್ಲಿಮರನ್ನು ನಿಂದಿಸುವ ಪ್ರಚೋದನಾತ್ಮಕ ಸಂದೇಶ ಕಳಿಸಿದ್ದರೂ ಗ್ರೂಪ್ ಅಡ್ಮಿನ್ ಆಗಿರುವ ಪೊಲೀಸರು ಕ್ರಮಕೈಗೊಳ್ಳದೇ ನಿರ್ಲಕ್ಷ ತೋರಿದ್ದಾರೆ ಎಂದು ದೂರಲಾಗಿದೆ.

ಸಮಾಜದ ಶಾಂತಿ ಕಾಪಾಡಬೇಕಾದ ಪೊಲೀಸರೇ ಅಡ್ಮಿನ್ ಆಗಿರುವ ಗ್ರೂಪ್‌ನಲ್ಲಿ ಧನಂಜಯ ಪುತ್ರನ್ ಕೋಮು ಪ್ರಚೋದನಾತ್ಮಕ ಸಂದೇಶ ಕಳಿಸಿರುವ ಬಗ್ಗೆ ಮುಲ್ಕಿ ಫಿಎಫ್‌ಐ ಖಂಡಿಸಿದೆ.

ಮಂಗಳೂರು ಪೊಲೀಸ್ ಆಯುಕ್ತರು ಪೊಲೀಸ್ ಠಾಣಾ ವ್ಯಾಪಿಯಲ್ಲಿ ‘ಬೀಟ್ ಪೊಲೀಸ್’ ವಾಟ್ಯಾಪ್ ಗ್ರೂಪ್ ರಚಿಸಿದ್ದು, ಪೊಲೀಸರು ಇದರ ಅಡ್ಮಿನ್ ಆಗಿರುತ್ತಾರೆ.

Get real time updates directly on you device, subscribe now.