ಮಂಗಳೂರು: ಟೆಂಪೊ-ಬೈಕ್ ಅಪಘಾತ, ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಟೆಂಪೊ ಮತ್ತು ಬೈಕ್ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವರು ಸ್ಥಳದಲ್ಲೇ ಸಾವಪ್ಪಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಸುರತ್ಕಲ್ ಹೊಸಬೆಟ್ಟು ಮಾರುತಿನಗರದ ವಿಶಾಖ ಐತಾಳ್(20) ಎಂದು ಯುವಕನನ್ನು ಗುರುತಿಸಲಾಗಿದೆ.

ಸ್ಕ್ಯಾನಿಂಗ್ ರಿಪೋರ್ಟ್ ಪಡೆದುಕೊಂಡು ಎ.ಜೆ ಆಸ್ಪತ್ರೆಯಿಂದ ಬೈಕ್‌ನಲ್ಲಿ ಮನೆ ಕಡೆ ತೆರಳುತ್ತಿದ್ದಾಗ, ಕುಂಟಿಕಾನ ಬಳಿ ಟೆಂಪೊ ಆಕ್ಟೀವಾಕ್ಕೆ ಗುದ್ದಿದ ಬಳಿಕ ಡಿವೈಡರ್ ದಾಟಿ ಬೈಕ್ ಸವಾರ ವಿಶಾಖ್ ಅವರ ಮೇಲೆ ಬಿದ್ದ ಪರಿಣಾಮ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು.

ವಿಶಾಖ್  ನಿಟ್ಟೆ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯಾಗಿದ್ದರು.

ಸಂಚಾ಼ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.