ವಿದ್ಯುತ್ ಆಘಾತದಿಂದ ಮೂರು ದನಗಳ ಸಾವು

ಬೀರೂರು ಚಂದ್ರಹಾಸ ಶೆಟ್ಟಿಯವರಿಗೆ ಸೇರಿದ ದನಗಳು ಇವು ಎಂದು ತಿಳಿದುಬಂದಿದೆ.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ತಾಲೂಕಿನ ಮಂಜನಾಡಿ ಗ್ರಾಮದ ಮೋಂಟುಗೋಳಿಯ ಪದಿಜ್ಞಾರ್ ಬಳಿ ರಸ್ತೆ ಬದಿ ವಿದ್ಯುದಾಘಾತದಿಂದ ಮೂರು ದನಗಳು ಸಾವಪ್ಪಿದ ಘಟನೆ ವರದಿಯಾಗಿದೆ.

ದನಗಳು ಸತ್ತು ಬಿದ್ದಿರುವ ಸ್ಥಳದ ಸಮೀಪ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕಂಬವಿದೆ. ವಿದ್ಯುತ್ ಆಘಾತದಿಂದ ದನಗಳು ಸತ್ತಿರಬಹುದು ಎಂದು ಶಂಕಿಸಲಾಗಿದೆ.

ಗ್ರಾಮ ಕರಣಿಕ ಪ್ರಸಾದ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು.

ಬೀರೂರು ಚಂದ್ರಹಾಸ ಶೆಟ್ಟಿಯವರಿಗೆ ಸೇರಿದ ದನಗಳು ಇವು ಎಂದು ತಿಳಿದುಬಂದಿದೆ.

Get real time updates directly on you device, subscribe now.