ಮಂಗಳೂರು: ಮ್ಯಾನ್‌ಹೋಲ್‌ಗೆ ಇಳಿದು ದುರಸ್ತಿ ಮಾಡಿದ ಕಾರ್ಪೋರೇಟರ್

ಕಾರ್ಮಿಕರೂ ಇದ್ದರೂ ಅವರು ಕೆಳಗೆ ಇಳಿಯುವ ಉತ್ಸಾಹ ತೋರಿಸದಿದ್ದಾಗ ಮನೆಯಿಂದ ಬಟ್ಟೆ ತರಿಸಿಕೊಂಡು ಸ್ವತ: ಇಳಿದು ಕೆಲಸ ಮಾಡಿದ್ದರು.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ನಗರ ಪಾಲಿಕೆ ಸದಸ್ಯರೋರ್ವರು ಸ್ವತ: ಮ್ಯಾನ್ ಹೋಲ್‌ಗೆ ಇಳಿದು ದುರಸ್ತಿ ಮಾಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕದ್ರಿ ಕಂಬಳ ವಾರ್ಡ್ ಬಿಜೆಪಿ ಕಾಪೊರೇಟರ್ ಮನೋಹರ ಶೆಟ್ಟಿಯವರು ಚರಂಡಿಯಲ್ಲಿ ನೀರಿನ ಹರಿವಿಗೆ ತಡೆಯಾಗಿ ಸಮಸ್ಯೆ ಉಂಟಾದ ಸಂದರ್ಭ ಸ್ವತ: ಚೇಂಬರ್ ಒಳಗೆ ಇಳಿದು ಕೆಲಸ ಮಾಡಿ ಸರಿಪಡಿಸಿದ್ದಾರೆ.

ಈ ಸಂದರ್ಭ ಸ್ಥಳದಲ್ಲಿ ಕಾರ್ಮಿಕರೂ ಇದ್ದರೂ ಅವರು ಕೆಳಗೆ ಇಳಿಯುವ ಉತ್ಸಾಹ ತೋರಿಸದಿದ್ದಾಗ ಮನೆಯಿಂದ ಬಟ್ಟೆ ತರಿಸಿಕೊಂಡು ಸ್ವತ: ಇಳಿದು ಕೆಲಸ ಮಾಡಿದ್ದರು.

Get real time updates directly on you device, subscribe now.