‘ಎಸ್.ಐ.ಒ’ ಹಸಿರು ಕರಾವಳಿ’ ಪರಿಸರ ಜಾಗೃತಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಚಾಲನೆ

ಎಸ್.ಐ.ಓ ದಕ್ಷಿಣ ಕನ್ನಡ ಜಿಲ್ಲಾ  ಘಟಕವು ಒಂದು ತಿಂಗಳ "ಹಸಿರು ಕರಾವಳಿ"  ಜಿಲ್ಲಾ ಮಟ್ಟದ ಪರಿಸರ ಜಾಗೃತಿ ಅಭಿಯಾನವನ್ನು ಆಯೋಜಿಸಿದೆ.

ಈ ಸಂಧರ್ಭದಲ್ಲಿ ಎಸ್.ಐ.ಓ ಜಿಲ್ಲಾಧ್ಯಕ್ಷರಾದ ಅಶೀರುದ್ದೀನ್ ಆಲಿಯಾ, ಕುದ್ರೋಳಿ ಘಟಕದ ಸದಸ್ಯರಾದ ಮುಹಮ್ಮದ್ ನಿಹಾಲ್, ಮತ್ತು ರುಮಾನ್  ಜೊತೆಗಿದ್ದರು.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸಷನ್ ಆಫ್ ಇಂಡಿಯಾ(ಎಸ್.ಐ.ಓ) ಇದರ ದಕ್ಷಿಣ ಕನ್ನಡ ಜಿಲ್ಲಾ  ಘಟಕವು ಒಂದು ತಿಂಗಳ “ಹಸಿರು ಕರಾವಳಿ”  ಜಿಲ್ಲಾ ಮಟ್ಟದ ಪರಿಸರ ಜಾಗೃತಿ ಅಭಿಯಾನವನ್ನು ಆಯೋಜಿಸಿದೆ.

ಜಿಲ್ಲಾಮಟ್ಟದ ಅಭಿಯಾನವನ್ನು  ದಕ್ಷಿಣ ಕನ್ನಡ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಯಾದ  ಸಿಂಧೂ ಬಿ ರೂಪೇಶ್ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಧಿಕೃತ ಚಾಲನೆ ನೀಡಿ ಕಾರ್ಯಕ್ರಮದ ಯಶಸ್ವಿಗೆ ಶುಭ ಹಾರೈಸಿದರು.

ಈ ಸಂಧರ್ಭದಲ್ಲಿ ಎಸ್.ಐ.ಓ ಜಿಲ್ಲಾಧ್ಯಕ್ಷರಾದ ಅಶೀರುದ್ದೀನ್ ಆಲಿಯಾ, ಕುದ್ರೋಳಿ ಘಟಕದ ಸದಸ್ಯರಾದ ಮುಹಮ್ಮದ್ ನಿಹಾಲ್, ಮತ್ತು ರುಮಾನ್  ಜೊತೆಗಿದ್ದರು.

ಈ ಅಭಿಯಾನದ ಪ್ರಯುಕ್ತ ಪ್ರಸ್ತುತ ದೇಶಕ್ಕೆ ಅಂಟಿಕೊಂಡಿರುವ ಮಹಾಮಾರಿ ಕೋವಿಡ್ -19 ಕೊರೋನ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮನೆಯಲ್ಲಿರುವುದರಿಂದ ಎಸ್.ಐ.ಓ ವಿದ್ಯಾರ್ಥಿಗಳಿಗಾಗಿ ವಿವಿಧ ಘಟಕಗಳ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಗಿಡಗಳನ್ನು ವಿತರಿಸುವುದು, ಮಕ್ಕಳಿಗೆ ಪರಿಸರ ಜಾಗೃತಿ ಸ್ಪರ್ಧೆಗಳನ್ನು ಏರ್ಪಡಿಸುವುದು, ಹೂವು ಮತ್ತು ತರಕಾರಿ ತೋಟಗಳನ್ನು ನಿರ್ಮಿಸಲು ಪ್ರೋತ್ಸಾಹಿಸುವುದು ಮತ್ತು ಸಹಕರಿಸುವುದು ಇತ್ಯಾದಿ. ಇದು ನಮ್ಮ ಜವಾಬ್ದಾರಿಯುತ ಹೊಣೆಗಾರಿಕೆಯಾಗಿದೆ ಎಂಬ ಜಾಗೃತಿ  ಉಂಟುಮಾಡಲು ವಿದ್ಯಾರ್ಥಿ ಯುವಕರಲ್ಲಿ  ಸ್ವಚ್ಛ ಪರಿಸರದ  ಬಗ್ಗೆ ಕಾಳಜಿ ಮತ್ತು ಪ್ರೀತಿ ಮೂಡಿಸಲು ಈ ಅಭಿಯಾನವು ಸಹಕಾರಿಯಾಗುವುದು.

Get real time updates directly on you device, subscribe now.