ಮಂಗಳೂರು: ಪತ್ನಿಯ ಕೊಲೆಗೈದು ಅತ್ತೆಗೆ ಕರೆಮಾಡಿದ ಪತಿ

ಕರಾವಳಿ ಕರ್ನಾಟಕ ವರದಿ
ಮಂಗಳೂರು:  ಬುಧವಾರ ರಾತ್ರಿ ಪತ್ನಿಯನ್ನು ಬಜಪೆ ಬಳಿ ಕರಂಬಾರು ಅಂತೋಣಿಕಟ್ಟೆ ಕಲ್ಲು ಕ್ವಾರೆಗೆ ತಳ್ಳಿ ಕೊಲೆಗೈದ ಪತಿ, ಗುರುವಾರ ರಾತ್ರಿ ಪತ್ನಿಯ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ ಘಟನೆ ವರದಿಯಾಗಿದೆ.

ಕಾಸರಗೋಡು ನಿವಾಸಿ, ಪ್ರಸ್ತುತ ಕಾವೂರಿನಲ್ಲಿ ನೆಲೆಸಿದ್ದ ಶಾಂತಾ ಮಣಿಯಾಣಿ (30) ಕೊಲೆಯಾದವರು.

ಕೊಲೆ ಆರೋಪಿ, ಟಿಪ್ಪರ್ ಚಾಲಕ ಗಣೇಶ(40) ಪತ್ನಿಯ ಕೊಲೆ ಬಳಿಕ ಅತ್ತೆಗೆ ವಿಷಯ ತಿಳಿಸಿದ್ದು, ಈ ಮಾಹಿತಿ ಅನುಸರಿಸಿ ಘಟನೆ ನಡೆದ ಸ್ಥಳಕ್ಕೆ ಗುರುವಾರ ಸಂಜೆ ಕಾವೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ಕಾವೂರು ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.

Get real time updates directly on you device, subscribe now.