ಬೆಳ್ತಂಗಡಿ: ಪಿಕಪ್ ಮೇಲೆ ಬಿದ್ದ ಹೈಟೆನ್ಶನ್ ವಿದ್ಯುತ್ ಕಂಬ

ಯಾವುದೇ ಗಾಯಗಳಿಲ್ಲದೇ ಚಾಲಕ ಪಾರಾಗಿದ್ದಾರೆ.

ಇಲಾಖೆಯ ಅಧಿಕಾರಿಗಳು ಸುದ್ದಿ ತಿಳಿದೊಡನೆ ಧಾವಿಸಿ ಬಂದು ಲೈನ್ ತೆರವುಗೊಳಿಸಿದರು.

ಕರಾವಳಿ ಕರ್ನಾಟಕ ವರದಿ
ಬೆಳ್ತಂಗಡಿ: ಪಿಕಪ್ ವಾಹನವೊಂದರ ಮೇಲೆ ಹೈಟೆನ್ಶನ್ ವಿದ್ಯುತ್ ಕಂಬ ಮುರಿದು ಬಿದ್ದ ಘಟನೆ ಬೆಳಿಗ್ಗೆ ನಡೆದಿದೆ.

ವೇಣೂರು ಗೋಳಿಯಂಗಡಿಯಿಂದ ಗುರುವಾಯನಕೆರೆಗೆ ಲಿನ್ಸ್ ಟಿ. ಡಿ. ಎಂಬವರು ಪಿಕಪ್ ಚಲಾಯಿಸಿಕೊಂಡು ಬರುತ್ತಿದ್ದ ಸಂದರ್ಭ ಪಡಂಗಡಿ ಸುಬೋದ್ ಮಹಲ್ ಬಳಿ ಹೈಟೆನ್ಶನ್ ಕಂಬ ಮುರಿದು ಪಿಕಪ್ ಮೇಲೆ ಬಿದ್ದಿತ್ತು. ಯಾವುದೇ ಗಾಯಗಳಿಲ್ಲದೇ ಚಾಲಕ ಪಾರಾಗಿದ್ದಾರೆ.

ಇಲಾಖೆಯ ಅಧಿಕಾರಿಗಳು ಸುದ್ದಿ ತಿಳಿದೊಡನೆ ಧಾವಿಸಿ ಬಂದು ಲೈನ್ ತೆರವುಗೊಳಿಸಿದರು.

ಇಲ್ಲಿ ಇನ್ನೆರಡು ಕಂಬಗಳು ವಾಲಿದ್ದು ಬೀಳುವ ಸಾಧ್ಯತೆ ಇದೆ.

Get real time updates directly on you device, subscribe now.