ಬಂಟ್ವಾಳ: ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಎಸ್.ಐ.ಓ ದಿಂದ ಅಭಿನಂದನೆ

ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್.ಐ.ಓ) ಪಾಣೆಮಂಗಳೂರು ಘಟಕದ ವತಿಯಿಂದ ಸನ್ಮಾನ.

ಬಂಟ್ವಾಳ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಮೊಡಂಕಾಪು ಕಾರ್ಮೆಲ್ ಪದವಿ ಪೂರ್ವ ಕಾಲೇಜಿನ ಆಶೆಲ್ ಮೆನೇಜಸ್ ಮನೆಗೆ ಭೇಟಿ ನೀಡಿ, ಪೋಷಕರ ಸಮ್ಮುಖದಲ್ಲಿ ಎಸ್.ಐ.ಓ ಪಾಣೆಮಂಗಳೂರು ಘಟಕದ ನಿಯೋಗವು ಸನ್ಮಾನಿಸಿತು.

ಕರಾವಳಿ ಕರ್ನಾಟಕ ವರದಿ
ಬಂಟ್ವಾಳ: 2019-20 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ, ವಿಜ್ಞಾನ ಹಾಗೂ ಕಲಾ ವಿಭಾಗದಲ್ಲಿ ಬಂಟ್ವಾಳ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಪ್ರತಿಭಾನ್ವಿತರನ್ನು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್.ಐ.ಓ) ಪಾಣೆಮಂಗಳೂರು ಘಟಕದ ವತಿಯಿಂದ ಸನ್ಮಾನಿಸಿ, ಅಭಿನಂದಿಸಲಾಯಿತು.

ವಿಜ್ಞಾನ ವಿಭಾಗದಲ್ಲಿ (591 ಅಂಕ) ಗಳಿಸಿದ ವಿಟ್ಲ ಅಳಿಕೆಯ ಸತ್ಯ ಸಾಯಿ ಪದವಿ ಪೂರ್ವ ಕಾಲೇಜಿನ ಶ್ರೀಶ ಕೃಷ್ಣ,  ವಾಣಿಜ್ಯ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದ ಸತ್ಯ ಸಾಯಿ ಪದವಿ ಪೂರ್ವ ಕಾಲೇಜಿನ ಅಖಿಲೇಶ್ (585 ಅಂಕ ) ಹಾಗೂ ಕಲಾ ವಿಭಾಗದಲ್ಲಿ (577 ಅಂಕ) ಗಳಿಸಿ ಬಂಟ್ವಾಳ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಮೊಡಂಕಾಪು ಕಾರ್ಮೆಲ್ ಪದವಿ ಪೂರ್ವ ಕಾಲೇಜಿನ ಆಶೆಲ್ ಮೆನೇಜಸ್ ರವರ ಮನೆಗೆ ಭೇಟಿ ನೀಡಿ, ಅವರ ಪೋಷಕರ ಸಮ್ಮುಖದಲ್ಲಿ ಎಸ್.ಐ.ಓ ಪಾಣೆಮಂಗಳೂರು ಘಟಕದ ನಿಯೋಗವು ಸನ್ಮಾನಿಸಿ, ಅಭಿನಂದಿಸಿತು.

ಈ ಸಂದರ್ಭದಲ್ಲಿ ಎಸ್.ಐ.ಓ. ದ.ಕ. ಜಿಲ್ಲಾ ಕಾರ್ಯದರ್ಶಿಗಳಾದ ರಿಝ್ವಾನ್ ಅಝ್ಹರಿ, ಮುತಹ್ಹರ್ ಬೋಳಂಗಡಿ, ಎಸ್.ಐ.ಓ. ಪಾಣೆಮಂಗಳೂರು ಘಟಕಾಧ್ಯಕ್ಷರಾದ ತಮೀಝ್ ಅಲಿ ಕಾರಾಜೆ, ಕಾರ್ಯದರ್ಶಿ ಮುಬಾರಿಶ್ ಚೆಂಡಾಡಿ, ಕ್ಯಾಂಪಸ್ ಕಾರ್ಯದರ್ಶಿ ಸಲ್ವಾನ್ ಬೋಳಂಗಡಿ,ಉಮರ್ ಫಾರೂಕು ವಿಟ್ಲ ಉಪಸ್ಥಿತರಿದ್ದರು.

Get real time updates directly on you device, subscribe now.