ಬಂಟ್ವಾಳ: ಎಸ್.ಐ.ಓ ದಿಂದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಸನ್ಮಾನ

ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್.ಐ.ಒ) ಪಾಣೆಮಂಗಳೂರು ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ರಿಯಾಝ್ ಲಾಯಿಲ ಸಹಕಾರ ನೀಡಿದರು.

ಕರಾವಳಿ ಕರ್ನಾಟಕ ವರದಿ
ಬಂಟ್ವಾಳ: ಶಿಕ್ಷಕರ  ದಿನಾಚರಣೆಯ ಅಂಗವಾಗಿ ಪ್ರಕಟಿಸುವ  ದ.ಕ ಜಿಲ್ಲಾಮಟ್ಟದ  ಶಿಕ್ಷಕರ ಪ್ರಶಸ್ತಿಯನ್ನು ಪಡೆದ ಬೆಳ್ತಂಗಡಿ ವಲಯದ  ಶಿಕ್ಷಕರನ್ನು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್.ಐ.ಒ) ಪಾಣೆಮಂಗಳೂರು ಘಟಕದ ವತಿಯಿಂದ ಸನ್ಮಾನಿಸಿ, ಅಭಿನಂದಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆ (ಕಿರಿಯ ವಿಭಾಗ) ದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಗೆ ಆಯ್ಕೆಯಾದ ರಕ್ತೇಶ್ವರಿ ಪದವು ಶಾಲೆಯ ಚೈತ್ರ ಪ್ರಭಾ ಶ್ರೀಶಂ, ಪ್ರಾಥಮಿಕ ಶಾಲೆ (ಹಿರಿಯ ವಿಭಾಗ) ದಲ್ಲಿ ಕುಂಜತ್ತೋಡಿ ಶಾಲೆಯ ಸಬೀನಾ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಕೊಕ್ರಾಡಿ ಶಾಲೆಯ ಅಕ್ಕಮ್ಮ ಅವರನ್ನು ಮನೆಗೆ ತೆರಳಿ ಅಭಿನಂದಿಸಲಾಯಿತು.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ರಿಯಾಝ್ ಲಾಯಿಲ ಸಹಕಾರ ನೀಡಿದರು.

ಈ ಸಂದರ್ಭದಲ್ಲಿ ಎಸ್.ಐ.ಓ. ದ.ಕ. ಜಿಲ್ಲಾ ಕಾರ್ಯದರ್ಶಿಗಳಾದ ರಿಝ್ವಾನ್ ಅಝ್ಹರಿ, ಮುತಹ್ಹರ್ ಬೋಳಂಗಡಿ, ಎಸ್.ಐ.ಓ. ಪಾಣೆಮಂಗಳೂರು ಘಟಕಾಧ್ಯಕ್ಷರಾದ ತಮೀಝ್ ಅಲಿ ಕಾರಾಜೆ, ಕಾರ್ಯದರ್ಶಿ ಮುಬಾರಿಶ್ ಚೆಂಡಾಡಿ, ಕ್ಯಾಂಪಸ್ ಕಾರ್ಯದರ್ಶಿ ಸಲ್ವಾನ್ ಬೋಳಂಗಡಿ ಉಪಸ್ಥಿತರಿದ್ದರು.

Get real time updates directly on you device, subscribe now.