ಮುಂಬೈ: ಖ್ಯಾತ ತುಳು ನಟ ಸದಾಶಿವ ಸಾಲ್ಯಾನ್ ಇನ್ನಿಲ್ಲ

ಖ್ಯಾತ ತುಳು ಚಿತ್ರ ನಟ ಸದಾಶಿವ ಸಾಲ್ಯಾನ್ ಅವರು ಮೀರಾ ರಸ್ತೆಯಲ್ಲಿನ ತನ್ನ ನಿವಾಸದಲ್ಲಿ ಆದಿತ್ಯವಾರ ಕೊನೆಯುಸಿರೆಳೆದಿದ್ದಾರೆ.

ಮುಂಬೈ: ಖ್ಯಾತ ತುಳು ಚಿತ್ರ ನಟ ಸದಾಶಿವ ಸಾಲ್ಯಾನ್ ಅವರು ಮೀರಾ ರಸ್ತೆಯಲ್ಲಿನ ತನ್ನ ನಿವಾಸದಲ್ಲಿ ಆದಿತ್ಯವಾರ ಕೊನೆಯುಸಿರೆಳೆದಿದ್ದಾರೆ.

ಪೆಟ್ಟಾಯಿ ಪಿಲಿ, ಬದ್ಕರೆ ಬುಡ್ಲೆ, ಸತ್ಯ ಓಲುಂಡು, ದಾರೆದ ಸೀರೆ, ಸಮರಸಿಂಹ, ಒಂತೆ ಅಡ್ಜೆಸ್ಟ್ ಮಲ್ಪೆ, ಸಿಡಿದೆದ್ದ ಪಾಂಡವರು ಇವಳಂತಹ ಹೆಂಡ್ತಿ ಮುಂತಾದ 50ಕ್ಕೂ ಹೆಚ್ಚು ತುಳು-ಕನ್ನಡ ಚಿತ್ರಗಳಲ್ಲಿ ನಟಿಸಿರುವ ಮುಂಬಯಿ ರಂಗ ಕಲಾವಿದ ಮತ್ತು ಖ್ಯಾತ ತುಳು ಚಿತ್ರ ನಟ ಸದಾಶಿವ_ಸಾಲ್ಯಾನ್ ಅವರ ನಿಧನ ವಾರ್ತೆ ಕರಾವಳಿಕರ್ನಾಟಕ ಜಿಲ್ಲೆಗಳ ಅವರ ಅಭಿಮಾನಿಗಳಲ್ಲಿ ಅಪಾರ ಬೇಸರ ಉಂಟುಮಾಡಿದೆ.
ಬಹುತೇಕ ತುಳು ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ ಹೆಗ್ಗಳಿಕೆ ಅವರದಾಗಿತ್ತು.

ಕನ್ನಡ ಸಿನೆಮಾ ರಂಗದ ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್ ಮುಂತಾದ ಖ್ಯಾತ ನಟರ ಜೊತೆಗೂ ಸಾಲ್ಯಾನ್ ನಟಿಸಿದ್ದರು.

ಮುಂಬೈಯಲ್ಲಿ ಕಾರ್ಯಕ್ಷೇತ್ರ ಹೊಂದಿದ್ದ ಸಾಲ್ಯಾನ್ ಅವರು ಅನಾರೋಗ್ಯದಿಂದಾಗಿ ಕಳೆದ ಕೆಲ ವರ್ಷಗಳಿಂದ ನಟನೆಯನ್ನು ಕೈಬಿಟ್ಟಿದ್ದರು.

Get real time updates directly on you device, subscribe now.