ಮುಂಬೈಯಿಂದ ಬಂದ ಗರ್ಭಿಣಿ ಕೊರೋನಾ ಪೊಸಿಟಿವ್: ಉಡುಪಿ ಡಿಸಿ

ಮೇ.12ರಂದು ಮುಂಬೈಯಿಂದ ಜಿಲ್ಲೆಗೆ ಬಂದು ಕ್ವಾರಂಟೈನ್ ನಲ್ಲಿದ್ದ ಏಳು ತಿಂಗಳ ಗರ್ಭಿಣಿ.

ಬಸ್ ನಲ್ಲಿ ಬಂದಿದ್ದ ಇಪ್ಪತ್ತೈದು ಜನರ ಗಂಟಲ ದ್ರವವನ್ನು ಕೊರೋನಾ ಪರೀಕ್ಷೆಗೆ ಕಳಿಸುವ ಬಗ್ಗೆ ಕ್ರಮ

ಕರಾವಳಿ ಕರ್ನಾಟಕ ವರದಿ
ಉಡುಪಿ: ಮೇ.12ರಂದು ಮುಂಬೈಯಿಂದ ಜಿಲ್ಲೆಗೆ ಬಂದು ಕ್ವಾರಂಟೈನ್ ನಲ್ಲಿದ್ದ ಏಳು ತಿಂಗಳ ಗರ್ಭಿಣಿ(27ವರ್ಷ)ಗೆ ಕೊರೊನಾ  ಪೊಸಿಟಿವ್ ಎಂದು ಉಡುಪಿ ಡಿಸಿ ಜಿ. ಜಗದೀಶ್ ಹೇಳಿದ್ದಾರೆ. ಅವರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರೊಂದಿಗೆ ಬಂದಿದ್ದ ಪತಿಯನ್ನೂ ಐಸೋಲೇಶನ್ ನಲ್ಲಿಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭ ಬಸ್ ನಲ್ಲಿ ಬಂದಿದ್ದ ಇಪ್ಪತ್ತೈದು ಜನರ ಗಂಟಲ ದ್ರವವನ್ನು ಕೊರೋನಾ ಪರೀಕ್ಷೆಗೆ ಕಳಿಸುವ ಬಗ್ಗೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

 

Get real time updates directly on you device, subscribe now.