ಹೆಬ್ರಿ ‘ಕೊರೋನ’ : ಲಾಡ್ಜ್ ಮೇಲ್ವಿಚಾರಕರ ವಿರುದ್ಧ ಪ್ರಕರಣ

ಹೆಬ್ರಿಯ ಲಾಡ್ಜ್ ನಲ್ಲಿ ಕ್ವಾರಂಟೈನ್‌ನಲ್ಲಿರುವ ಇಬ್ಬರಿಗೆ ಮೇ20 ರಂದು ಕೋರೋನಾ ಪಾಸಿಟಿವ್ ಬಂದಿದ್ದ ಹಿನ್ನೆಲೆ.

ಕ್ವಾರಂಟೈನ್ ನಲ್ಲಿರದೇ ನಾಡ್ಪಾಲು ಗ್ರಾಮದ ಸೀತಾನದಿಯ ಮನೆಯಲ್ಲಿದ್ದು. ತಿರುಗಾಡುತ್ತಿದ್ದಾರೆ ಎಂದು ದೂರಲಾಗಿದೆ.

ಕರಾವಳಿ ಕರ್ನಾಟಕ ವರದಿ
ಹೆಬ್ರಿ: ಕ್ವಾರಂಟೈನ್‌ನಲ್ಲಿರದೇ ಮನೆಯಲ್ಲಿದ್ದು, ಪರಿಸರದಲ್ಲಿ ತಿರುಗಾಡುತ್ತಿದ್ದಾರೆಂದು ಲಾಡ್ಜ್ ಮೇಲ್ವೀಚಾರಕ ಮತ್ತು ಅವರ ಪುತ್ರಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಬ್ರಿಯ ಲಾಡ್ಜ್ ನಲ್ಲಿ ಕ್ವಾರಂಟೈನ್‌ನಲ್ಲಿರುವ ಇಬ್ಬರಿಗೆ ಮೇ20 ರಂದು ಕೋರೋನಾ ಪಾಸಿಟಿವ್ ಬಂದಿತ್ತು.  ಲಾಡ್ಜ್ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದ ವಿಠಲ ಹೆಗ್ಡೆ ಮತ್ತು ಅವರ ಮಗಳು ತೃಪ್ತಿ ಹೆಗ್ಡೆ ಲಾಡ್ಜ್ ನಲ್ಲಿ ಕ್ವಾರಂಟೈನ್ ನಲ್ಲಿರದೇ ಅವರ ಮನೆಯಾದ ನಾಡ್ಪಾಲು ಗ್ರಾಮದ ಸೀತಾನದಿಯ ಮನೆಯಲ್ಲಿದ್ದು. ಪರಿಸರದಲ್ಲಿ ತಿರುಗಾಡುತ್ತಿದ್ದಾರೆ ಎಂದು ದೂರಲಾಗಿದೆ.

ಇವರನ್ನು ಕ್ವಾರಂಟೈನ್ ಮಾಡಲು ಅವರ ಮನೆಯಾದ ನಾಡ್ಪಾಲು ಗ್ರಾಮದ ಸೀತಾನದಿಗೆ ಎಂಬಲ್ಲಿಗೆ ಹೋದಾಗ ವಿಠಲ ಹೆಗ್ಡೆ ಮತ್ತು ತೃಪ್ತಿ ಹೆಗ್ಡೆಯವರು ಜಿಲ್ಲಾಧಿಕಾರಿಯವರ ಅದೇಶವನ್ನು ಉಲ್ಲಂಘನೆ ಮಾಡಿ ನಿರ್ಲಕ್ಷ ತೋರಿಸಿದ್ದಾರೆ ಎಂದು ದೂರಲಾಗಿದೆ.

ಇವರಿಬ್ಬರು  ಪರಿಸರದಲ್ಲಿ ತಿರುಗಾಡಿದರೆ ಸೋಂಕು  ಹರಡುವ ಸಾಧ್ಯತೆ ಇದೆ ಎಂದು ಕಬ್ಬಿನಾಲೆ ಗ್ರಾಮದ  ಚಂದ್ರಹಾಸ ಶೆಟ್ಟಿಗಾರ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Get real time updates directly on you device, subscribe now.