ಕುಂದಾಪುರ: ತಂದೆಯ ಸ್ನೇಹಿತನಿಂದಲೇ ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ

ಆರೋಪಿಯನ್ನು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪೊಲೀಸರು ಬಂಧಿಸಿ ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಆರೋಪದಲ್ಲಿ ಚಿಕ್ಕನಸಾಲು ರಸ್ತೆಯ ನಿವಾಸಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಬಿಶ್ವಾಸ್(35) ಎಂದು ಗುರುತಿಸಲಾಗಿದೆ.

ಚಿಕ್ಕನಸಾಲು ರಸ್ತೆ ನಿವಾಸಿಯೋರ್ವರು ಮೇ.31ರ ರಾತ್ರಿ ಮಲಗಿದವರು ಬೆಳಗಿನ ಜಾವ ನೋಡಿದಾಗ ತಮ್ಮ ಮಗಳ ಮೇಲೆ ಆರೋಪಿ ದೌರ್ಜನ್ಯ ಎಸಗುತ್ತಿರುವುದನ್ನು ನೋಡಿದ್ದಾರೆ, ಬಾಲಕಿ ಬೊಬ್ಬೆ ಹಾಕಿದಾಗ ತಂದೆಗೆ ಎಚ್ಚರವಾಗಿತ್ತು.

ಈ ಬಗ್ಗೆ ಅವರು ಪೊಲೀಸ್ ದೂರು ನೀಡಿದ್ದು, ಆರೋಪಿಯನ್ನು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಬಿಶ್ವಾಸ್ ಮರ ಏರಿ ಹಂಚು ತೆಗೆದು ಮನೆಯೊಳಗಿಳಿದು ಮಲಗಿದ್ದ ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯಕ್ಕೆ ಯತ್ನಿಸಿದ್ದ ಎನ್ನಲಾಗಿದೆ. ಬಾಲಕಿಯ ತಂದೆಯೊಂದಿಗೆ ಹತ್ತು ವರ್ಷಕ್ಕೂ ಅಧಿಕ ಕಾಲದ ಸ್ನೇಹಿತನಾಗಿದ್ದ ಆರೋಪಿ ಇಂಥ ಕೃತ್ಯಕ್ಕೆ ಇಳಿದಿದ್ದು, ಮನೆಮಂದಿಗೆ ಅಘಾತಕರವಾಗಿದೆ.

ಪೊಲೀಸರು ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.