ಕುಂದಾಪುರ: ಸಿಐಟಿಯುನಿಂದ ರಿಕ್ಷಾ ಚಾಲಕರಿಗೆ ಆರೋಗ್ಯ ಪರಿಹಾರ ಹಸ್ತಾಂತರ

ಸಂಘದ ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ, ಸಂಘಟನ ಕಾರ್ಯದರ್ಶಿ ರಮೇಶ್ ವಿ.,ರಮೇಶ ಬೆಟ್ಟಾಗರ ಮುಂತಾದ ಸದಸ್ಯರು ಪಾಲ್ಗೊಂಡಿದ್ದರು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಹೃದಯ ಚಿಕಿತ್ಸೆಗೆ ಒಳಗಾದ ಆಟೋ ರಿಕ್ಷಾ ಚಾಲಕರೋರ್ವರಿಗೆ ಆರೋಗ್ಯ ಪರಿಹಾರ ಮೊತ್ತ ಇಪ್ಪತ್ತು ಸಾವಿರ ರೂ. ಚೆಕ್ ಅನ್ನು ನೀಡಲಾಯಿತು.  ಉಮೇಶ್ ಎನ್. ಅವರಿಗೆ ಸಿಐಟಿಯು ಹಿರಿಯ ಸದಸ್ಯ ಕೃಷ್ಣ ಚೆಕ್ ಹಸ್ತಾಂತರಿಸಿದರು.

ಉಮೇಶ್ ಎನ್. ಅವರು ತಾಲೂಕು ಆಟೊ ರಿಕ್ಷಾ ಮತ್ತು ವಾಹನ ಚಾಲಕರ ಸಂಘ (CITU) ಇದರ ಸ್ಥಾಪಕ ಸದಸ್ಯರಲ್ಲೊಬ್ಬರು. ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಉಮೇಶ್ ಎನ್. ಅವರು ಇತ್ತೀಚೆಗೆ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಹೃದಯ ಚಿಕಿತ್ಸೆಗೆ ಒಳಗಾಗಿದ್ದು. ಅವರಿಗೆ ಸಂಘದವತಿಯಿಂದ ಆರೋಗ್ಯ ಪರಿಹಾರದ ಮೊತ್ತವನ್ನು ನೀಡಲಾಗಿದೆ.

ಸಂಘದ ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ, ಸಂಘಟನ ಕಾರ್ಯದರ್ಶಿ ರಮೇಶ್ ವಿ.,ರಮೇಶ ಬೆಟ್ಟಾಗರ ಮುಂತಾದ ಸದಸ್ಯರು ಪಾಲ್ಗೊಂಡಿದ್ದರು.

Get real time updates directly on you device, subscribe now.