ಕುಂದಾಪುರ: ಲಾಕ್‌ಡೌನ್ ಸಂದರ್ಭ ಹಸಿದವರಿಗೆ ಊಟ, ಹುಸೇನ್ ಹೈಕಾಡಿಗೆ ಸನ್ಮಾನ

ಹುಸೇನ್ ಹೈಕಾಡಿಯವರಿಗೆ ಸಹನಾ ಸುಹೇದ ಹಾಲ್ ನಲ್ಲಿ ಭಾರತೀಯ ಜೇಸಿಸ್ ವಲಯ 15 ರ ವಲಯ ಅಧ್ಯಕ್ಷ  ಕೆ. ಕಾರ್ತಿಕೇಯ ಮಧ್ಯಸ್ತ  ಸನ್ಮಾನಿಸಿದರು.

ಕೋವಿಡ್19 ಲಾಕ್ ಡೌನ್ ಸಂದರ್ಭದಲ್ಲಿ 40 ದಿನಗಳ ಕಾಲ ಹಸಿದವರಿಗೆ ಊಟ ನೀಡಿದ ಜೆಸಿಐ ಕುಂದಾಪುರ ಸಿಟಿ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಕೋವಿಡ್19 ಲಾಕ್ ಡೌನ್ ಸಂದರ್ಭದಲ್ಲಿ 40 ದಿನಗಳ ಕಾಲ ಹಸಿದವರಿಗೆ ಊಟ ನೀಡಿ ಅವಶ್ಯಕತೆ ಇದ್ದವರಿಗೆ ಕಿಟ್ ಗಳನ್ನು ನೀಡಿದ ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಅಧ್ಯಕ್ಷರಾದ ಹುಸೇನ್ ಹೈಕಾಡಿಯವರಿಗೆ ಸಹನಾ ಸುಹೇದ ಹಾಲ್ ನಲ್ಲಿ ಭಾರತೀಯ ಜೇಸಿಸ್ ವಲಯ 15ರ ವಲಯ ಅಧ್ಯಕ್ಷ  ಕೆ. ಕಾರ್ತಿಕೇಯ ಮಧ್ಯಸ್ತ  ಸನ್ಮಾನಿಸಿದರು.

ಹಲವಾರು ವರುಷ ಗಳಿಂದ ಕುಂದಾಪುರ ಪರಿಸರ ದಲ್ಲಿ ಸಮಾಜ ಸೇವೆ ಮಾಡುತ್ತಿದ್ದು, ಸೇವೆಯನ್ನು ಮುಂದುವರಿಸಿ ಜನರ ಸೇವೆ ಮಾಡುತ್ತಿರುವ ಹುಸೇನ್ ಹೈಕಾಡಿಯವರ ಸನ್ಮಾನ ಸಂದರ್ಭದಲ್ಲಿ ವಲಯ 15 ರ ತರಬೇತಿ ವಿಭಾಗ ದ ನಿರ್ದೇಶಕ ರಾದ ಅಶೋಕ್ ತೆಕ್ಕಟ್ಟೆ, ಜೆಸಿಐ ಕುಂದಾಪುರ ಸಿಟಿ  ಅಧ್ಯಕ್ಷ ನಾಗೇಶ್ ನಾವಡ, ನಿಕಟ ಪೂರ್ವ ಅಧ್ಯಕ್ಷ ಪ್ರಶಾಂತ್ ಹವಾಲ್ದಾರ್, ಪೂರ್ವ ಅಧ್ಯಕ್ಷ ರಾದ ರಾಘವೇಂದ್ರ ಚರಣ್ ನಾವಡ, ನಾಗೇಂದ್ರ ಪೈ, ಜಯಚಂದ್ರ ಶೆಟ್ಟಿ, ಮಂಜುನಾಥ್ ಕಾಮತ್,  ವಲಯ ತರಬೇತಿದಾರ ರಾದ ಕೆ ಕೆ  ಶಿವರಾಮ್,  ಜೇಸಿರೇಟ್ ಅಧ್ಯಕ್ಷೆ ರೇಖಾ, ಯುವ ಜೇಸಿ ಅಧ್ಯಕ್ಷ ಕೀರ್ತಿ, ಕಾರ್ಯದರ್ಶಿ ಅಭಿಲಾಷ್, ಉಪಾಧ್ಯಕ್ಷ ರಾದ ವಿಜಯ್ ಭಂಡಾರಿ, ದಿನೇಶ್ ಕುಂದರ್, ದಿನೇಶ್ ಪುತ್ರನ್, ಗುರುರಾಜ್ ಕೊತ್ವಾಲ್, ಮಹೇಶ್ ಶೇಟ್, ರಾಘವೇಂದ್ರ  ಕೆ ಸಿ ಸಂದೇಶ್ ಶೆಟ್ಟಿ  ಉಪಸ್ಥಿತರಿದ್ದರು.

Get real time updates directly on you device, subscribe now.