‘ಲಾಕ್‌ಡೌನ್’ ಸಂಕಟ: ದುಬೈಯಿಂದ ಬಂದ ಯುವಕ ಆತ್ಮಹತ್ಯೆ

ಗಲ್ಫ್‌ನಿಂದ ಊರಿಗೆ ಬಂದ ಬಳಿಕ ಸರಿಯಾದ ಉದ್ಯೋಗ ಸಿಗದೇ ಅತಂತ್ರ ಸ್ಥಿತಿಯಲ್ಲಿದ್ದ ಯುವಕ.

ತುಳು ಭಾಷೆ-ತುಳುನಾಡಿನ ಸಂಸ್ಕೃತಿ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಅರ್ನಾಲ್ಡ್ ಅವರು ಜನಪ್ರಿಯರಾಗಿದ್ದರು.

ಕರಾವಳಿ ಕರ್ನಾಟಕ ವರದಿ
ಉಡುಪಿ: ದುಬೈಯಿಂದ ಊರಿಗೆ ಬಂದ ಬಳಿಕ ಸರಿಯಾದ ಉದ್ಯೋಗ ಸಿಗದೇ ಅತಂತ್ರ ಸ್ಥಿತಿಯಲ್ಲಿದ್ದ ಯುವಕನೋರ್ವ ಆತ್ಮಹತ್ಯೆಗೈದ ಕಳವಳಕಾರಿ ಘಟನೆ ವರದಿಯಾಗಿದೆ.

ಕಾಪು ತಾಲೂಕು ಎಲ್ಲೂರು ಗ್ರಾಮದ ಮಾಣಿಯೂರು ನಿವಾಸಿ ವಿಕ್ಟರ್ ಡಿ’ಸೋಜಾ ಅವರ ಮಗ ಅರ್ನಾಲ್ಡ್(29) ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ.

ಗಲ್ಫ್ ಉದ್ಯೋಗ ಕೈತಪ್ಪಿದ ಬಳಿಕ ಅಲ್ಲಿಂದ ಬಂದವರು ಕಾಪುವಿನ ಕ್ಯಾಂಟೀನ್‌ನಲ್ಲಿ ಉದ್ಯೋಗಿಯಾಗಿದ್ದರು. ಲಾಕ್‌ಡೌನ್ ಬಳಿಕ ಮನೆಗೆ ಬಂದು ಕೃಷಿ ಕೆಲಸ ಮಾಡುತ್ತಿದ್ದರು.

ತುಳು ಭಾಷೆ-ತುಳುನಾಡಿನ ಸಂಸ್ಕೃತಿ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಅರ್ನಾಲ್ಡ್ ಅವರು ಜನಪ್ರಿಯರಾಗಿದ್ದರು.

ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.