ಜನ ರೊಚ್ಚಿಗೆದ್ದು ಕೇಂದ್ರ ಸರಕಾರ ಕಿತ್ತೊಗೆಯುವ ಕಾಲ: ಉಡುಪಿ ಜಿಲ್ಲಾ ಕಾಂಗ್ರೆಸ್ ಎಚ್ಚರಿಕೆ

ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಯು. ಆರ್. ಸಭಾಪತಿ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಎಂ. ಎ. ಗಪೂರ್, ಕಾರ್ಯದರ್ಶಿ ವೆರೋನಿಕಾ ಕರ್ನೆಲಿಯೋ ಮೋದಿ ಸರಕಾರದ ವಿಫಲತೆಯನ್ನು ಜನರ ಮುಂದೆ ಬಿಚ್ಚಿಟ್ಟರು.

ಅಂತರಾಷ್ಟ್ರೀಯ  ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕನಿಷ್ಠ ಮಟ್ಟಕ್ಕೆ ಇಳಿದಾಗ ಕೂಡಾ ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಗಳು ಗಗನಕ್ಕೇರಿದೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಕೇಂದ್ರ ಸರಕಾರದ ತೈಲ ಬೆಲೆ ಏರಿಕೆಯಿಂದ ಜನಸಮಾನ್ಯರ ಬದುಕಿಗೆ ಮಾರಕವಾಗುತ್ತಿದೆ. ನಿಮಗೆ ಒಳ್ಳೆಯ ದಿನಗಳನ್ನು ಕೊಡುತ್ತೇವೆ ಎಂಬ ಸುಳ್ಳು ಭರವಸೆಯನ್ನು ನೀಡಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ಇದೀಗ ಜನತೆಯನ್ನು ಕಷ್ಟ ಕಾರ್ಪಣ್ಯಕ್ಕೆ ದೂಡುತ್ತಿದೆ. ಇದೇ ಮುಂದುವರಿದರೆ ಈ ದೇಶದ ಜನ ರೊಚ್ಚಿಗೆದ್ದು ಕೇಂದ್ರ ಸರಕಾರವನ್ನು ಕಿತ್ತೊಗೆಯುವ ಕಾಲ ಬರುತ್ತೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ತೈಲ ಬೆಲೆ ಏರಿಕೆಯಿಂದ ಜನರ ಬದುಕು ದುಸ್ತರ

ಜನ ಸಾಮಾನ್ಯರ ಬದುಕು ಮೂರಾಬಟ್ಟೆಯಾಗುತ್ತಿದೆ. ತೈಲ ಬೆಲೆ ಏರಿಕೆಯಿಂದ ಜನರ ಬದುಕು ದುಸ್ತರವಾಗಿದೆ ಎಂದು ಅವರು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಆಯೋಜಿಸಿದ ತೈಲ ಬೆಲೆ ಏರಿಕೆ ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ನುಡಿದರು.

ಸುಳ್ಳುಗಳನ್ನು ಹೇಳಿಕೊಂಡು ತಿರುಗುತ್ತಿದೆ ಸರಕಾರ

ಎಲ್ಲಾ ರಂಗದಲ್ಲೂ ಕೂಡಾ ಸರಕಾರ ದೇಶದ ಜನಹಿತವನ್ನು ಕಾಯುವಲ್ಲಿ ವಿಫಲವಾಗುತ್ತಿದೆ. ಅದನ್ನು ಮರೆ ಮಾಚಲು ಸುಳ್ಳುಗಳನ್ನು ಹೇಳಿಕೊಂಡು ತಿರುಗುತ್ತಿದೆ. ಅಂತರಾಷ್ಟ್ರೀಯ  ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕನಿಷ್ಠ ಮಟ್ಟಕ್ಕೆ ಇಳಿದಾಗ ಕೂಡಾ ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಗಳು ಗಗನಕ್ಕೇರಿದೆ. ಇದನ್ನು ಸಮತೋಲನ ಮಾಡಲಾಗದೆ ಕೇಂದ್ರ ಸರಕಾರ ಅದರ ಬಗ್ಗೆ ನಿರ್ಲಕ್ಷ ದೋರಣೆಯನ್ನು ತೋರಿ ಸುಳ್ಳುಗಳ ಸಾಮಾಜ್ಯದ ಮೇಲೆ ದೇಶವನ್ನು ಆಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಚೀನಾದ ಸೈನಿಕರು ಭಾರತದ ಭೂಭಾಗಕ್ಕೆ ನುಗ್ಗಿರುವುದು ಸ್ಪಷ್ಟವಾದರೂ…

ಚೀನಾದ ಸೈನಿಕರು ಭಾರತದ ಭೂಭಾಗಕ್ಕೆ ನುಗ್ಗಿರುವುದು ಉಪಗ್ರಹದಲ್ಲಿ ಸ್ಪಷ್ಟವಾಗಿ ಚಿತ್ರಿತವಾದರೂ ದೇಶದ ಪ್ರಧಾನಿ ಅಂತಹ ಘಟನೆ ಜರಗಿಲ್ಲ ಎಂದು ಸರ್ವ ಪಕ್ಷದ ಸಭೆಯಲ್ಲಿ ಹೇಳಿ ಈ ಪ್ರಕರಣದಿಂದ ಹುತಾತ್ಮರಾದ 20 ಜನ ವೀರ ಯೊಧರ ಬಲಿದಾನವನ್ನು ಅವಮಾನಿಸುತ್ತಿದ್ದಾರೆ. ಇದನ್ನು ಪ್ರಶ್ನಿಸಿದ ಕಾಂಗ್ರೆಸ್ ಪಕ್ಷವನ್ನು ದೇಶದ್ರೋಹಿ ಪಕ್ಷ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ದೇಶದ್ರೋಹಿಯೇ ಆಗಿದ್ದಲ್ಲಿ ಪಕ್ಷದ ಮೇಲೆ ಕೂಡಲೇ ಕ್ರಮ ಕೈಗೊಳ್ಳಿ ಇಲ್ಲ ತಮ್ಮ ಸುಳ್ಳನ್ನು ಒಪ್ಪಿಕೊಳ್ಳಿ ಎಂದ ಅವರು ಕೇಂದ್ರ ಸರಕಾರ ಪತನವಾಗುವ ತನಕ ನಾವು ನಮ್ಮ ಹೋರಾಟವನ್ನು ವಿವಿಧ ಹಂತದಲ್ಲಿ ಮುಂದುವರಿಸುತ್ತೇವೆ ಎಂದರು.

ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಯು. ಆರ್. ಸಭಾಪತಿ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಎಂ. ಎ. ಗಪೂರ್, ಕಾರ್ಯದರ್ಶಿ ವೆರೋನಿಕಾ ಕರ್ನೆಲಿಯೋ ಮೋದಿ ಸರಕಾರದ ವಿಫಲತೆಯನ್ನು ಜನರ ಮುಂದೆ ಬಿಚ್ಚಿಟ್ಟರು.

ಪ್ರತಿಭಟನಾ ಸಭೆಯ ನಂತರ ಉಡುಪಿ ಜಿಲ್ಲಾಧಿಕಾರಿಗಳಿಗೆ ತೈಲ ಬೆಲೆ ಏರಿಕೆಯ ವಿರುದ್ಧ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ  ಪ್ರಖ್ಯಾತ್ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಬಿ ನರಸಿಂಹ ಮೂರ್ತಿ, ಶಬ್ಬಿರ್ ಅಹ್ಮದ್, ಅಣ್ಣಯ್ಯ ಶೇರಿಗಾರ್, ವೈ. ಸುಕುಮಾರ್ ಪಡುಬಿದ್ರಿ, ರಾಜು ಪೂಜಾರಿ, ನೀರೆ ಕೃಷ್ಣ ಶೆಟ್ಟಿ, ಮಹಾಬಲ ಕುಂದರ್, ಕೀತರ್ಿ ಶೆಟ್ಟಿ,  ಜ್ಯೋತಿ ಹೆಬ್ಬಾರ್, ನವೀನ್ಚಂದ್ರ ಸುವರ್ಣ, ಮದನ್ ಕುಮಾರ್, ಪ್ರದೀಪ್ ಕುಮಾರ್ ಶೆಟ್ಟಿ, ಮಂಜುನಾಥ ಪೂಜಾರಿ, ಶೇಖರ್ ಮಡಿವಾಳ, ಶಂಕರ್ ಕುಂದರ್, ಹರಿಪ್ರಸಾದ್ ಶೆಟ್ಟಿ, ಗೀತಾ ವಾಗ್ಲೆ, ಯತೀಶ್ ಕರ್ಕೇರಾ, ಕುಶಲ್ ಶೆಟ್ಟಿ, ಜನಾರ್ದನ ಭಂಡಾರ್ಕರ್, ರೊಶನಿ ಒಲಿವರ್, ಶಂಕರ್ ನಾಯಕ್, ಶಾಂತಿ ಪಿರೇರಾ, ಉಪೇಂದ್ರ ಗಾಣಿಗ, ಕೃಷ್ಣಮೂರ್ತಿ ಅಚಾರ್ಯ, ಡಾ. ಸುನೀತಾ ಶೆಟ್ಟಿ, ಹರೀಶ್ ಶೆಟ್ಟಿ ಪಾಂಗಳ, ಶೇಖರ್ ಪೂಜಾರಿ, ಉದ್ಯಾವರ ನಾಗೇಶ್ ಕುಮಾರ್, ಶಶಿಧರ ಶೆಟ್ಟಿ ಎಲ್ಲೂರು, ಪ್ರಶಾಂತ್ ಜತ್ತನ್ನ, ಕಿಶೋರ್ ಎರ್ಮಾಳ್, ಭುಜಂಗ ಶೆಟ್ಟಿ,  ಹರೀಶ್ ಶೆಟ್ಟಿ ಬ್ರಹ್ಮಾವರ, ಇಸ್ಮಾಯಿಲ್ ಆತ್ರಾಡಿ, ಕೇಶವ ಕೋಟ್ಯಾನ್, ಸುರೇಶ್ ನಾಯ್ಕ್, ಸತಿಶ್ ಕೊಡವೂರು ಮೊದಲಾದವರು ಉಪಸ್ಥಿತರಿದ್ದರು.

 

 

 

Get real time updates directly on you device, subscribe now.