ಉದ್ಯಾವರ ಯು.ಎಫ್.ಸಿ.ಯಿಂದ ಸಾಗುವನಿ ಗಿಡ ವಿತರಣೆ

ಸಂಸ್ಥೆಯ ನಿರ್ದೇಶಕರಾದ ರಾಜ್ಯಸಭಾ ಸದಸ್ಯ ಓಸ್ಕರ್ ಫೆರ್ನಾಂಡಿಸ್ ಅವರ ಆಪ್ತ ಸಹಾಯಕರಾದ ಉದ್ಯಾವರ ನಾಗೇಶ್ ಕುಮಾರ್  ಗಿಡಗಳನ್ನು ವಿತರಿಸಿದರು.

ಕರಾವಳಿ ಕರ್ನಾಟಕ ವರದಿ
ಉಡುಪಿ: ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ವರ್ಷ ಪ್ರತಿ ಜರಗುವ ಹಾಗೆ ಈ ಬಾರಿಯೂ ಸಾರ್ವಜನಿಕರಿಗೆ ಸಾಗುವಾನಿ ಗಿಡ ವಿತರಣಾ ಕಾರ್ಯಕ್ರಮ ಸಂಸ್ಥೆಯ ಕಾರ್ಯಾಲಯದಲ್ಲಿ ಜರಗಿತು.

ಪ್ರತೀ ವರ್ಷ ಕೂಡಾ ಒಂದೊಂದು ಶಾಲೆಯನ್ನು ಕೇಂದ್ರೀಕರಿಸಿ ಅಲ್ಲಿನ ವಿದ್ಯಾರ್ಥಿಗಳಿಗೆ ಗಿಡ ವಿತರಿಸಿ ಒಂದು ವರ್ಷದ ಅವಧಿಯಲ್ಲಿ ಉತ್ತಮವಾಗಿ ಬೆಳೆಸಿದವರಿಗೆ ನಗದು ಬಹುಮಾನವನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡ ಸಂಸ್ಥೆ ಈ ಬಾರಿ ಶಾಲೆಗಳು ಪುನರಾರಂಭಗೊಳ್ಳದ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಈ ಸಾಗುವಾನಿ ಗಿಡವನ್ನು ವಿತರಿಸಿದರು.

ಪರಿಸರ ರಕ್ಷಣೆಯ ಸಂಸ್ಥೆಯ ಈ ರಚನಾತ್ಮಕಕಾರ್ಯಕ್ರಮ ಗಮನಿಸಿ ಬೆಂಗಳೂರಿನ ಸಾಲು ಮರದ ತಿಮ್ಮಕ್ಕ ಗ್ರೀನರಿ ಫೌಂಡೇಶನ್ ಸಂಸ್ಥೆ ಸಂಸ್ಥೆಗೆ ಪ್ರಶಸ್ತಿ ಕೊಟ್ಟು 2017ರಲ್ಲಿ ಗೌರವಿಸಿದೆ.

ಈ ಸರಳ ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕರಾದ ರಾಜ್ಯಸಭಾ ಸದಸ್ಯ ಓಸ್ಕರ್ ಫೆರ್ನಾಂಡಿಸ್ ಅವರ ಆಪ್ತ ಸಹಾಯಕರಾದ ಉದ್ಯಾವರ ನಾಗೇಶ್ ಕುಮಾರ್  ಗಿಡಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಿಯಾಝ್ ಪಳ್ಳಿ, ಸಂಸ್ಥೆಯ ಅಧ್ಯಕ್ಷರಾದ ತಿಲಕ್ರಾಜ್ ಸಾಲ್ಯಾನ್, ಕೋಶಾಧಿಕಾರಿ ಸೋಮಶೇಖರ್ ಸುರತ್ಕಲ್, ಪ್ರಧಾನ ಕಾರ್ಯದರ್ಶಿ  ಗಿರೀಶ್ ಗುಡ್ಡೆಯಂಗಡಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಗಿರೀಶ್ ಕುಮಾರ್, ಆಬಿದ್ ಅಲಿ,  ಪುಂಡರೀಶ್ ಕುಂದರ್, ಮೇರಿ ಡಿ’ಸೋಜಾ, ಲಾರೆನ್ಸ್ ಡೆಸಾ, ಶೇಖರ್ ಕೆ. ಕೋಟ್ಯಾನ್, ಹಮೀದ್ ಸಾಬ್ಜಾನ್, ಮಹಮ್ಮದ್ ನಬಿಲ್, ವಿಶ್ವನಾಥ ಪೂಜಾರಿ, ಭಾಸ್ಕರ್ ಬಂಗೇರ, ಲೋಕನಾಥ ಬೊಳ್ಜೆ,  ಸೀತಾರಾಮ ಗಾಣಿಗ,  ಶಶಾಂಕ್ ಮಟ್ಟು, ರವೀಂದ್ರ ಭಂಡಾರಿ, ಮಹಮ್ಮದ್ ಆಸಿಫ್, ಮೊದಲಾದವರು ಉಪಸ್ಥಿತರಿದ್ದರು.

ಅಧ್ಯಕ್ಷ ತಿಲಕ್‌ರಾಜ್ ಸಾಲ್ಯಾನ್ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಗಿರೀಶ್ ಗುಡ್ಡೆಯಂಗಡಿ ವಂದಿಸಿದರು

Get real time updates directly on you device, subscribe now.