ಕೋಟ: ಹೊಟೇಲ್ ಲತಾ, ಮಾಲಕರ ಮನೆ ಸೀಲ್ ಡೌನ್

ಹೊಟೇಲ್ ಮಾಲಕರು ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿಲ್ಲದಿರುವುದರಿಂದ ಹೊಟೇಲ್‌ಗೆ ಭೇಟಿ ಕೊಟ್ಟ ಗ್ರಾಹಕರಿಂದ ಸೋಂಕು ತಗುಲಿರುವ ಸಾಧ್ಯತೆ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಕೋಟ ಪರಿಸರದ ಸುಪ್ರಸಿದ್ಧ ಹೊಟೇಲ್ ಲತಾ ಹಾಗೂ ಮಾಲಕರ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ಮಂಗಳವಾರ ಕೋವಿಡ್ ಪರೀಕ್ಷೆ ನಡೆಸಿದ ಸಂದರ್ಭ ಹೊಟೇಲ್ ಮಾಲಕರಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ  ಸೀಲ್ ಡೌನ್ ಕ್ರಮಕೈಗೊಳ್ಳಲಾಗಿದೆ.

ಹೊಟೇಲ್ ಮಾಲಕರು ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿಲ್ಲದಿರುವುದರಿಂದ ಹೊಟೇಲ್‌ಗೆ ಭೇಟಿ ಕೊಟ್ಟ ಗ್ರಾಹಕರಿಂದ ಸೋಂಕು ತಗುಲಿರುವ ಸಾಧ್ಯತೆ ಇದೆ.

ಹೊಟೇಲ್ ಸಿಬಂದಿ ಮತ್ತು ಮನೆಯವರನ್ನೂ ಗುರುವಾರ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈಗಾಗಲೇ ಇವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಹೊಟೇಲ್ ಲತಾ ಕೋಟ ಪರಿಸರದ ಜನರ ಅಚ್ಚುಮೆಚ್ಚಿನ ಹೊಟೇಲ್‌ಗಳಲ್ಲಿ ಒಂದಾಗಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡುತ್ತಿದ್ದರು.

Get real time updates directly on you device, subscribe now.