ಕುಂದಾಪುರ: ಕಟ್ಕೇರಿ ಕಾಳಿಕಾಂಬಾ ದೇಗುಲದಲ್ಲಿ ಕಳ್ಳತನ

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ತಾಲೂಕು  ಕೋಣಿ  ಗ್ರಾಮದ ಕಟ್ಕೇರಿ ಶ್ರೀ ಮಹಾದೇವಿ ಕಾಳಿಕಾಂಬಾ ಅಮ್ಮನವರ ದೇವಸ್ಥಾನದ ಎದುರು ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿ ಕಳವುಗೈಯಲಾಗಿದೆ.

ದೇವಿಯ ಕೈಯಲ್ಲಿದ್ದ ಬೆಳ್ಳಿ ಖಡ್ಗ, ಬೆಳ್ಳಿ ಪರಷು ಕೊಡಲಿ , ಸಿಸಿಟಿವಿಯ ಡಿ.ವಿ.ಆರ್  ಕಳವು ಮಾಡಿದ್ದಾರೆ. ಒಟ್ಟು ಇಪ್ಪತ್ಮೂರು ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವುಗೈಯಲಾಗಿದ್ದು, ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 

Get real time updates directly on you device, subscribe now.