ಸಿಟಿ ಬಸ್ ದರ ಹೆಚ್ಚಳಕ್ಕೆ ಉಡುಪಿ ಕಾಂಗ್ರೆಸ್ ಖಂಡನೆ

ಜನರ ಹಿತರಕ್ಷಣೆ ಮಾಡಬೇಕಾದ ಉಡುಪಿ ಶಾಸಕರು ಸರಕಾರಿ ನರ್ಮ್ ಬಸ್ಗಳನ್ನು ಶಾಶ್ವತವಾಗಿ ಸ್ಥಗಿತಗೊಳಿಸುವಂತೆ ಭಾಸವಾಗುತ್ತಿದೆ.

ಜಿಲ್ಲಾಡಳಿತ ಹಾಗೂ ಆರ್.ಟಿ.ಒ. ಹತೋಟಿಯಲ್ಲಿ ಉಡುಪಿ ನಗರ ಸಾರಿಗೆ ಇಲ್ಲವೇ ಇಲ್ಲ ಎಂದು ಎಂದು ಕಾಂಗ್ರೆಸ್ ಆಕ್ರೋಶ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಪ್ರಸ್ತುತ ಕೆಲವೆಡೆ ಖಾಸಗಿ ಬಸ್ಗಳು ಲಾಕ್ಡೌನ್ ಸಡಿಲಗೊಂಡ ನಂತರ ಏಕಾಏಕಿ ರೂ.13 ರಿಂದ 20ರೂಪಾಯಿಗೆ ಟಿಕೆಟ್ ದರವನ್ನು ಹೆಚ್ಚಿಸುವ ಮೂಲಕ ಕೋವಿಡ್ 19 ಲಾಕ್ಡೌನ್ನಿಂದ ಸಂಕಷ್ಟಕ್ಕೊಳಗಾದ ಜನರನ್ನು ಸುಲಿಗೆ ಮಾಡುತ್ತಿದ್ದಾರೆ. ಜನರ ಹಿತರಕ್ಷಣೆ ಮಾಡಬೇಕಾದ ಉಡುಪಿ ಶಾಸಕರು ಸರಕಾರಿ ನರ್ಮ್ ಬಸ್ಗಳನ್ನು ಶಾಶ್ವತವಾಗಿ ಸ್ಥಗಿತಗೊಳಿಸುವಂತೆ ಭಾಸವಾಗುತ್ತಿದೆ ಎಂದು ಸಿಟಿ ಬಸ್ ಟಿಕೇಟ್ ದರ ಹೆಚ್ಚಳದ ವಿರುದ್ಧ ಬ್ಲಾಕ್ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ನಗರ ಸಾರಿಗೆ ಸರಕಾರಿ ನರ್ಮ್ ಬಸ್‌ಗಳ ಬದಲಿಗೆ ಲಾಕ್ಡೌನ್ ಸಡಿಲಿಕೆ ನಂತರ ಕೆಲವೆಡೆ ಲಿಂಕ್ ಬಸ್ಗಳನ್ನು ಸಂಚಾರಕ್ಕೆ ವ್ಯವಸ್ಥೆಗೊಳಿಸಿದ್ದರು.ಎರಡನೇ ಹಂತದಲ್ಲಿ ಖಾಸಗಿ ಬಸ್ಗಳ ಸಂಚಾರ ಪ್ರಾರಂಭವಾಗಿ ಕಳೆದ 3 ದಿನಗಳಿಂದ ಸರಕಾರಿ ಬಸ್ಗಳು ತಮ್ಮ ಸಂಚಾರವನ್ನು ನಿಲ್ಲಿಸಿವೆ. ಉಡುಪಿ ಡಿಪೊದ ಪ್ರಬಂಧಕರಲ್ಲಿ ಮಾತನಾಡಿದಾಗ ಕೆಲವು ಮಾರ್ಗದ ಬಸ್ಗಳ ಸಂಚಾರ ನಷ್ಟದಲ್ಲಿರುವುದರಿಂದ ಮೇಲಾಧಿಕಾರಿಗಳ ಆದೇಶದನ್ವಯ ಬಸ್ ಸೇವೆ ಸ್ಥಗಿತಗೊಳಿಸಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಜಿಲ್ಲಾಡಳಿತ ಹಾಗೂ ಆರ್.ಟಿ.ಒ. ಹತೋಟಿಯಲ್ಲಿ ಉಡುಪಿ ನಗರ ಸಾರಿಗೆ ಇಲ್ಲವೇ ಇಲ್ಲ. ಬಸ್ ಮಾಲಕರು ಜನರನ್ನು ಲೂಟಿಗೈಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಈ ಸಂಕಷ್ಟದ ಸಂದರ್ಭದಲ್ಲಿಯೂ ತೈಲ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆಯಾದರೂಅಬಕಾರಿ ಸುಂಕದ ನಷ್ಟವನ್ನು ಭರಿಸಲುಕೇಂದ್ರ ಸರಕಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.

ಕೇಂದ್ರ ರಾಜ್ಯ ಸರಕಾರಗಳು ಬಸ್ ಚಾಲಕರು ಹಾಗೂ ನಿರ್ವಾಹಕರಿಗೆ ಗರಿಷ್ಟ ಆರ್ಥಿಕ ನೆರವು ನೀಡುವ ಮೂಲಕ ಬಸ್ ಮಾಲಕರಿಗೆ ತೆರಿಗೆ ಮನ್ನಾ ಮಾಡುವ ಮೂಲಕ ಈ ಸಂಕಷ್ಟದ ಕಾಲದಲ್ಲಿ ಸಹಾಯ ಮಾಡದಿದ್ದಲ್ಲಿ ಸಾರಿಗೆ ಉದ್ಯಮ ನಶಿಸಿ ಹೋಗಿ ಉದ್ಯಮವನ್ನು ನಂಬಿ ಬದುಕುವ ಕುಟುಂಬಗಳು ಬೀದಿ ಪಾಲಾಗುವ ಸಾದ್ಯತೆಇರುವುದರಿಂದ ಕೇಂದ್ರರಾಜ್ಯ ಸರಕಾರಗಳು ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ಅಧ್ಯಕ್ಷರಾದ ಸತೀಶ್ಅಮೀನ್ ಪಡುಕೆರೆ, ಉಡುಪಿ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ, ನಗರಸಭಾ ಸದಸ್ಯರಾದ ರಮೇಶ ಕಾಂಚನ್, ಗಣೇಶ್ ನೆರ್ಗಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.