ಕಲ್ಯಾಣಪುರ ‘ಏಂಜೆಲ್ಸ್ ಫೌಂಡೇಶನ್’‌ನಿಂದ ಬಡ ಕುಟುಂಬಕ್ಕೆ 5.50ಲಕ್ಷ ರೂ. ವೆಚ್ಚದ ಮನೆ ಹಸ್ತಾಂತರ

ಜಾತಿ ಬೇಧ-ಭಾವ, ಜಾತಿ-ಧರ್ಮ ಮರೆತು ಕೆಲಸ ಮಾಡಿದರೆ ಸಮಾಜದಲ್ಲಿ ಬದಲಾವಣೆ ಸಾಧ್ಯ.: ‘’ಏಂಜಲ್ಸ್’ ಸಂಸ್ಥೆಯ ಸಂಸ್ಥಾಪಕ ರೋಬರ್ಟ್ ಡಿ’ಸೋಜ

ಕೊರೋನಾ ಸಂಕಷ್ಟದಲ್ಲಿ ಆರ್ಥಿಕ ಹಿಂಜರಿತ-ಸಂಪನ್ಮೂಲ ಕೊರತೆಯಿಂದ ಇಂಥ ಮನೆ ನಿರ್ಮಿಸುವುದು ತುಂಬಾ ಕಷ್ಟದ ಕೆಲಸವಾದರೂ ‘ಏಂಜೆಲ್ಸ್ ಫೌಂಡೇಶನ್’ ತನ್ನ ಸಮಾಜಮುಖಿ ಜವಾಬ್ದಾರಿಯನ್ನು ಸಾಹಸದಿಂದ ನೆರವೇರಿಸಿರುವುದು ಜನರ ವಿಶ್ವಾಸಕ್ಕೆ ಪಾತ್ರವಾಗಿದೆ.

ಕರಾವಳಿ ಕರ್ನಾಟಕ ವರದಿ
ಉಡುಪಿ:  ‘ಏಂಜಲ್ಸ್ ಫೌಂಡೇಶನ್ ಕಲ್ಯಾಣಪುರ’ ಇವರು ಸುಮಾರು 5.50ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮನೆಯನ್ನು ಕಲ್ಲಮುಂಡ್ಕೂರು ಗ್ರಾಮದ ಅಭಯ ಪಂಜಾಡಿಯಲ್ಲಿ ವಾಸಿಸುವ ಗಣೇಶ್ ಪೂಜಾರಿಯವರ ಬಡ ಕುಟುಂಬಕ್ಕೆ ‘’ಏಂಜಲ್ಸ್’ ಸಂಸ್ಥೆಯ ಸಂಸ್ಥಾಪಕರಾದ ರೋಬರ್ಟ್ ಡಿ’ಸೋಜ ಅವರು ಹಸ್ತಾಂತರಿಸಿದರು.

ಮನುಷ್ಯತ್ವವೇ ನಮ್ಮ ಧರ್ಮ: ಡಿ’ಸೋಜ 

ಜಾತಿ ಬೇಧ-ಭಾವ, ಜಾತಿ-ಧರ್ಮ ಮರೆತು ಕೆಲಸ ಮಾಡಿದರೆ ಸಮಾಜದಲ್ಲಿ ಬದಲಾವಣೆ ಸಾಧ್ಯ. ಮನುಷ್ಯತ್ವವೇ ನಮ್ಮ ಧರ್ಮ ಎಂದು ಅರಿತು ಬಾಳಿದರೆ ಸಮಾಜದಲ್ಲಿ ಅವಕಾಶ ವಂಚಿತರಿಗೆ, ಸಹಾಯದ ಅಗತ್ಯ ಇರುವವರಿಗೆ ನೆರವಾಗಲು ಅನುಕೂಲವಾಗುವುದು ಎಂದು ಡಿ’ಸೋಜ ಅವರು ಈ ಸಂದರ್ಭ ಹೇಳಿದರು.

150ಕ್ಕೂ ಮಿಕ್ಕಿದ ಫಲಾನುಭವಿಗಳಿಗೆ ಸಹಾಯ

‘ಏಂಜೆಲ್ಸ್ ಫೌಂಡೇಶನ್’ ಕಳೆದ 15 ತಿಂಗಳಿಂದ ಸುಮಾರು 150ಕ್ಕೂ ಮಿಕ್ಕಿದ ಫಲಾನುಭವಿಗಳಿಗೆ ಸಹಾಯ ಮಾಡಿದೆ. ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಕ್ಯಾನ್ಸರ್ ಮತ್ತು ತೀವೃ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ಸಹಾಯ, ವೈದ್ಯಕೀಯ ಶಿಬಿರಗಳು, ರಕ್ತದಾನ ಶಿಬಿರಗಳು ಒಳಗೊಂಡಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಜನಮನ ತಲುಪಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಕೊರೋನಾ ಸಂಕಷ್ಟದಲ್ಲಿಯೂ ‘ಏಂಜೆಲ್ಸ್ ಫೌಂಡೇಶನ್’ ಸಾಹಸ

ಕೊರೋನಾ ಸಂಕಷ್ಟದಲ್ಲಿ ಆರ್ಥಿಕ ಹಿಂಜರಿತ-ಸಂಪನ್ಮೂಲ ಕೊರತೆಯಿಂದ ಇಂಥ ಮನೆ ನಿರ್ಮಿಸುವುದು ತುಂಬಾ ಕಷ್ಟದ ಕೆಲಸವಾದರೂ ‘ಏಂಜೆಲ್ಸ್ ಫೌಂಡೇಶನ್’ ತನ್ನ ಸಮಾಜಮುಖಿ ಜವಾಬ್ದಾರಿಯನ್ನು ಸಾಹಸದಿಂದ ನೆರವೇರಿಸಿರುವುದು ಜನರ ವಿಶ್ವಾಸಕ್ಕೆ ಪಾತ್ರವಾಗಿದೆ.

ಜಿಲ್ಲಾ ಲಯನ್ಸ್ ಗವರ್ನರ್ ಎನ್.ಎಂ.ಹೆಗ್ಡೆ ಉಪಸ್ಥಿತಿ

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಲಯನ್ಸ್ ಗವರ್ನರ್ ಎನ್.ಎಂ.ಹೆಗ್ಡೆ, ಲಯನ್ ಡಾ. ರಾಜಾರಾಮ್ ರೈ, ಏಂಜೆಲ್ಸ್ ಸಂಸ್ಥೆಯ ಉಪಾಧ್ಯಕ್ಷ  ರೊನಾಲ್ಡ್ ಸುವಾರಿಸ್, ಚಂದ್ರಹಾಸ ಸನಿಲ್ ಉಪಸ್ಥಿತರಿದ್ದರು.

ಶರತ್ ಶೆಟ್ಟಿಯವರು ಕಾರ್ಯಕ್ರಮ ನಿರ್ವಹಿಸಿದರು. ರೋಬರ್ಟ್ ಡಿಸೋಜ ಧನ್ಯವಾದ ಸಮರ್ಪಿಸಿದರು.

Get real time updates directly on you device, subscribe now.