ಕಾರು ಡಿಕ್ಕಿ: ಹಂಗಾರಕಟ್ಟೆಯ ಯುವಕ ಮೃತ್ಯು

ಕಾರೊಂದು ಡಿವೈಡರ್‌ಗೆ ಗುದ್ದಿ ಪಲ್ಟಿಯಾಗಿ ಬೈಕಿಗೆ ಗುದ್ದಿದಾಗ ರಸ್ತೆಗೆ ಅಪ್ಪಳಿಸಲ್ಪಟ್ಟ ಯುವಕನ ತಲೆಗೆ ಗಂಭೀರ ಏಟು.

ಕರಾವಳಿ ಕರ್ನಾಟಕ ವರದಿ
ಬ್ರಹ್ಮಾವರ: ಕಾರೊಂದು ಡಿವೈಡರ್‌ಗೆ ಗುದ್ದಿ ಪಲ್ಟಿಯಾಗಿ ಬೈಕಿಗೆ ಗುದ್ದಿದಾಗ ರಸ್ತೆಗೆ ಅಪ್ಪಳಿಸಲ್ಪಟ್ಟ ಯುವಕನೋರ್ವನ ತಲೆಗೆ ಗಂಭೀರ ಏಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಸೋಮವಾರ ಮದ್ಯಾಹ್ನ ನಡೆದಿದೆ.

ಬ್ರಹ್ಮಾವರ ತಾಲೂಕಿನ ಹಂಗಾರಕಟ್ಟೆ ಬಾಳ್ಕುದ್ರು ನಿವಾಸಿ ಆಕಾಶ್(21) ಚಿಕಿತ್ಸೆಗೆ ಸ್ಪಂದಿಸದೆ ಮಹೇಶ್ ಆಸ್ಪತ್ರೆಯಲ್ಲಿ ಮೃತಪಟ್ಟರು.

ಮಧ್ಯಾಹ್ನ 2:30ಸುಮಾರಿಗೆ ಕುಮ್ರಗೋಡು ಬಸ್ ಸ್ಟಾಪ್ ಬಳಿ ಗೆಳೆಯ ಆಕಾಶ್ ಅವರಿಂದ ರೂಂ ಕೀ ಪಡೆಯಲೆಂದು ಬಂದಿದ್ದ ಶರತ್ ಬೈಕ್ ನಿಲ್ಲಿಸಿಕೊಂಡಿದ್ದರು. ಈ ವೇಳೆ ಉಡುಪಿಯಿಂದ ಬಂದ ಕಾರು ಡಿವೈಡರ್‌ಗೆ ಗುದ್ದಿ, ಪಲ್ಟಿ ಹೊಡೆದು ರಸ್ತೆ ದಾಟಿ ಆಕಾಶ್ ಮತ್ತು ಬೈಕ್‌ನಲ್ಲಿದ್ದ ಶರತ್ ಅವರಿಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ಹೊಂಡಕ್ಕೆ ಬಿದ್ದಿತ್ತು. ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕಾಶ್ ಅವರು ಮಧ್ಯಾಹ್ನ 3ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ.

ಕಾರನ್ನು ಪ್ರೀತಮ್ ಎಂಬವರು ಚಲಾಯಿಸುತ್ತಿದ್ದರು. ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 

Get real time updates directly on you device, subscribe now.