ಗ್ರಾಮ ಪಂಚಾಯತ್ ಸದಸ್ಯೆ ವಿನಯಾ ರಾಜುಗೆ ನುಡಿ ನಮನ

'ವಿನಯ ರಾಜು ಅಗಲಿಕೆ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಗೆ ತುಂಬಲಾರದ ನಷ್ಟ.'

ವಿನಯ ಅಗಲಿಕೆ ನಮ್ಮೆಲ್ಲರಿಗೂ ಖೇದ ತಂದಿದೆ ಎಂದು ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಮಾಜಿ ಅಧ್ಯಕ್ಷ  ಉದ್ಯಾವರ ನಾಗೇಶ್ ಕುಮಾರ್ ನುಡಿದರು.

ಕರಾವಳಿ ಕರ್ನಾಟಕ ವರದಿ
ಉಡುಪಿ: ಮಿತಭಾಷಿಯಾಗಿದ್ದುಕೊಂಡು ಪ್ರೀತಿಯಿಂದ ಜನಸೇವೆ ಮತ್ತು ಸಂಘಟನೆಯಲ್ಲಿ ತೊಡಗಿಕೊಂಡ ನಮ್ಮೆಲ್ಲರ ಪ್ರೀತಿಯ ನಾಯಕಿ ವಿನಯ ರಾಜು ಅಗಲಿಕೆ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಗೆ ತುಂಬಲಾರದ ನಷ್ಟ ಎಂದು ಮಾಜಿ ಪಂಚಾಯತ್ ಅಧ್ಯಕ್ಷರಾದ ಚಂದ್ರಾವತಿ ಎಸ್. ಭಂಡಾರಿಯವರು ಮೃತರ ಭಾವಚಿತ್ರದ ಎದುರು ದೀಪ ಬೆಳಗಿಸಿ ಪುಷ್ಪಾರ್ಚನೆಯನ್ನು ಮಾಡಿ ನುಡಿದರು.

ಇತ್ತೀಚಿಗೆ ನಿಧನರಾದ ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ವಿನಯ ರಾಜು ಅವರಿಗೆ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಆಶ್ರಯದಲ್ಲಿ ಹಮ್ಮಿಕೊಂಡ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿನಯಾ ಅವರು ಕಾಂಗ್ರೆಸ್ ಪಕ್ಷ ಮಾತ್ರವಲ್ಲ ಉದ್ಯಾವರ ಮಹಿಳಾ ಮಂಡಲ ಅದ್ಯಕ್ಷರಾಗಿ, ಉದ್ಯಾವರ ಫ್ರೆಂಡ್ಸ್ ಸರ್ಕಲ್ ಸದಸ್ಯರಾಗಿ ನಿರಂತರವಾಗಿ ಜನಸೇವೆಯಲ್ಲಿ ತೊಡಗಿಕೊಂಡವರು. ಅವರ ಅಗಲಿಕೆ ನಮ್ಮೆಲ್ಲರಿಗೂ ಖೇದ ತಂದಿದೆ ಎಂದು ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಮಾಜಿ ಅಧ್ಯಕ್ಷ  ಉದ್ಯಾವರ ನಾಗೇಶ್ ಕುಮಾರ್ ನುಡಿದರು.

ಪತ್ರಕರ್ತ ಸ್ಟೀವನ್ ಕುಲಾಸೋ ಮೃತರಿಗೆ ನುಡಿ ನಮನ ಸಲ್ಲಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಕುಮಾರ್ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಗಂಧಿ ಶೇಖರ್, ಸರಳಾ ಎಸ್. ಕೋಟ್ಯಾನ್, ಉಪಾಧ್ಯಕ್ಷರಾದ ರಿಯಾಝ್ ಪಳ್ಳಿ, ಸದಸ್ಯರಾದ ಮೇರಿ ಡಿಸೋಜಾ, ಪುಂಡರೀಶ್ ಕುಂದರ್, ಸರೋಜಾ, ಜುಡಿತ್ ಪಿರೇರಾ, ಪಕ್ಷದ ಮುಖಂಡರಾದ ಅಜಿತ್ ಮೆಂಡನ್, ಸೋಮಶೇಖರ್ ಸುರತ್ಕಲ್, ಯು. ಸೀತಾರಾಮ್, ಸುಂದರ್ ಸುವರ್ಣ, ಹಮೀದ್ ಸಾಬ್ಜಾನ್, ಗಿರೀಶ್ ಗುಡ್ಡೆಯಂಗಡಿ, ಸರಸ್ವತಿ ಮೆಂಡನ್, ಸುಹೇಲ್ ರೆಹಮತ್, ವಿಶ್ವನಾಥ ಪೂಜಾರಿ, ಸತೀಶ್ ಡಿ. ಸಾಲ್ಯಾನ್, ಮೊಹಮ್ಮದ್ ಇಫರ್ಾನ್, ಪ್ರೇಮ್ ಮಿನೇಜಸ್ ಉಪಸ್ಥಿತರಿದ್ದರು.

ಆಬಿದ್ ಆಲಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Get real time updates directly on you device, subscribe now.