ವಿದೇಶದಿಂದ ಬರುವ ಮುನ್ನ ಕ್ವಾರಂಟೈನ್‌ಗೆ ಬದ್ದರಾಗುವ ಭರವಸೆ ಕೊಡಬೇಕು

ಸ್ವಂತ ಖರ್ಚಿನಲ್ಲಿ ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್, ಆ ಬಳಿಕ ಏಳು ದಿನ ಮನೆಯಲ್ಲಿಯೇ ಪ್ರತ್ಯೇಕವಾಗಿ ವಾಸವಾಗಿ ಇರತಕ್ಕದ್ದು.

ದೇಶಕ್ಕೆ ಬಂದೊಡನೆ ಒಟ್ಟು ಹದಿನಾಲ್ಕು ದಿನಗಳ ಕ್ವಾರಂಟೈನ್‌ಗೆ ಒಳಗಾಗುವುದು ಅನಿವಾರ್ಯ ಎಂದು ಆರೋಗ್ಯ ಸಚಿವಾಲಯದ ಪ್ರಕಟಣೆ.

ಕರಾವಳಿ ಕರ್ನಾಟಕ ವರದಿ
ನವದೆಹಲಿ: ವಿದೇಶದಿಂದ ಆಗಮಿಸುವವರು ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ದೇಶಕ್ಕೆ ಬಂದ ಕೂಡಲೇ ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಪಡುತ್ತೇವೆ ಎಂಬ ಭರವಸೆ ನೀಡಬೇಕೆಂದು ಕೇಂದ್ರ ಹೇಳಿದೆ. ವಿಮಾನ ಅಥವಾ ಹಡಗು ಹತ್ತುವ ಮೊದಲೇ ಎಲ್ಲ ಪ್ರಯಾಣಿಕರು ರೋಗ ಪ್ರಸರಣದ ಕನಿಷ್ಟ ಅವಕಾಶ ಖಚಿತಪಡಿಸುವ ನಿಯಮಕ್ಕೆ ಬದ್ದರಾಗಿರುವ ಭರವಸೆ ನೀಡಬೇಕಾಗುತ್ತದೆ. ಥರ್ಮಲ್ ಸ್ಕ್ರೀನಿಂಗ್ ಬಳಿಕ ವಿಮಾನ ಏರಲು ಅವಕಾಶ ನೀಡಲಾಗುತ್ತಿದ್ದು, ಟಿಕೆಟ್ ಜೊತೆಗೆ ಏಜೆನ್ಸಿಗಳು ನಿಯಮಾವಳಿಗಳ ಪಟ್ಟಿ ಒದಗಿಸುತ್ತಾರೆ ಎಂದು ಕೇಂದ್ರ ಸರಕಾರ ಹೇಳಿದೆ.

ಸ್ವಂತ ಖರ್ಚಿನಲ್ಲಿ ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್, ಆ ಬಳಿಕ ಏಳು ದಿನ ಮನೆಯಲ್ಲಿಯೇ ಪ್ರತ್ಯೇಕವಾಗಿ ವಾಸವಾಗಿ ಇರತಕ್ಕದ್ದು. ದೇಶಕ್ಕೆ ಬಂದೊಡನೆ ಒಟ್ಟು ಹದಿನಾಲ್ಕು ದಿನಗಳ ಕ್ವಾರಂಟೈನ್‌ಗೆ ಒಳಗಾಗುವುದು ಅನಿವಾರ್ಯ ಎಂದು ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಗರ್ಭಿಣಿಯರು, ತೀವೃ ಸ್ವರೂಪದ ಅನಾರೋಗ್ಯ, ಕುಟುಂಬ ಸದಸ್ಯರ ನಿಧನ, ಹತ್ತಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಕುಟುಂಬ ನಿರ್ವಹಣೆ ಮುಂತಾದ ಅಸಾಧಾರಣ ಕಾರಣಗಳಿದ್ದರೆ ಮಾತ್ರ ಹದಿನಾಲ್ಕು ದಿನಗಳ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗಿದೆ.

ಆರೋಗ್ಯಸೇತು ಆಪ್ ಕಡ್ಡಾಯವಾಗಿ ಪೋನ್ ನಲ್ಲಿ ಅಳವಡಿಸಿಕೊಳ್ಳಬೇಕು.

Get real time updates directly on you device, subscribe now.