ಮಂಡ್ಯದ ಮನೆಗಳನ್ನು ಬೆಳಗಿದ ಆಲಿಯಾ ಭಟ್: 40 ಮನೆಗಳಿಗೆ ಸೌರದೀಪ ಕೊಡುಗೆ

ಜಿಲ್ಲೆಯ ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿ ಗ್ರಾಮದ ಜನರಿಗೆ ಇಪ್ಪತ್ತೈದು ವರ್ಷಗಳ ಕಗ್ಗತ್ತಲಿನಿಂದ ಮುಕ್ತಿ ಸಿಕ್ಕೆದೆ. ಗ್ರಾಮದ ನಲವತ್ತು ಮನೆಗಳಿಗೆ ಬಾಲಿವುಡ್ ನಟಿ ಆಲಿಯಾ ಭಟ್ ಅವರು ಸೌರದೀಪಗಳನ್ನು ಒದಗಿಸುವುದರೊಂದಿಗೆ ಗ್ರಾಮಸ್ಥರ ಪ್ರೀತಿಪಾತ್ರರಾಗಿದ್ದಾರೆ.

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿ ಗ್ರಾಮದ ಜನರಿಗೆ ಇಪ್ಪತ್ತೈದು ವರ್ಷಗಳ ಕಗ್ಗತ್ತಲಿನಿಂದ ಮುಕ್ತಿ ಸಿಕ್ಕೆದೆ. ಗ್ರಾಮದ ನಲವತ್ತು ಮನೆಗಳಿಗೆ ಬಾಲಿವುಡ್ ನಟಿ ಆಲಿಯಾ ಭಟ್ ಅವರು ಸೌರದೀಪಗಳನ್ನು ಒದಗಿಸುವುದರೊಂದಿಗೆ ಗ್ರಾಮಸ್ಥರ ಪ್ರೀತಿಪಾತ್ರರಾಗಿದ್ದಾರೆ.

ಮೈ ವಾರ್ಡ್ ರೋಬ್ ಇಸ್ ಸೂ ವಾರ್ಡ್ ರೋಬ್ ಯೋಜನೆಯಡಿ ಈ ಸೌಲಭ್ಯ ಕಲ್ಪಿಸಲಾಗಿದ್ದು, ಮೈಸೂರು ರಸ್ತೆಯ ಎಪಿಎಂಸಿ ಯಾರ್ಡ್ ಬಳಿಯ ಗುಡಿಸಲು ವಾಸಿ ಬಡವರ ಬೆಳಕನ್ನು ಕಾಣುವ ಇಪ್ಪತ್ತೈದು ವರ್ಷಗಳ ಕನಸು ನನಸಾಗಿದೆ.
ನಲವತ್ತು ಗುಡಿಸಲುಗಳಲ್ಲಿರುವ ಇನ್ನೂರಕ್ಕೂ ಅಧಿಕ ಮಂದಿ ಮೊದಲ ಬಾರಿ ಮನೆ ಸೌರದೀಪದಿಂದ ಬೆಳಗಿದಾಗ ಖುಷಿ ಪಟ್ಟಿದ್ದಾರೆ. ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅವರು ಅಧಿಕಾರಿಗಳಿಗೆ ಸತತವಾಗಿ ಕಳೆದ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಯಾರೂ ಸ್ಪಂದಿಸಿರಲಿಲ್ಲ.

ಮೈ ವಾರ್ಡ್ ರೋಬ್ ಇಸ್ ಸೂ ವಾರ್ಡ್ ರೋಬ್(‘Mi Wardrobe is Su Wardrobe) ಅಭಿಯಾನದಲ್ಲಿ ಆಲಿಯಾ ಭಟ್ ಅವರ ಅಭಿಮಾನಿಗಳು ತಮಗಿಷ್ಟವಾದದ್ದನ್ನು ಆರಿಸಿಕೊಳ್ಳಬಹುದಾಗಿದ್ದು, ಈ ರೀತಿ ಸಂಗ್ರಹಿಸಲಾದ ಹಣದಿಂದ ಕಿಕ್ಕೇರಿ ಗ್ರಾಮವಾಸಿಗಳ ಮನೆಗಳಲ್ಲಿ ಸೌರದೀಪಗಳು ಬೆಳಗಿವೆ.

ಈ ಯೋಜನೆಯಲ್ಲಿ ಹವೆಲ್ಸ್ ಇಂಡಿಯಾ ಲಿ. ಅವರ ಸ್ಟ್ಯಾಂಡರ್ಡ್ ಇಲೆಕ್ಟ್ರಿಕಲ್ಸ್ ಕೂಡ ಕೈಜೋಡಿಸಿದೆ.

Get real time updates directly on you device, subscribe now.