ಲಾಕ್‌ಡೌನ್‌ಗೆ ತತ್ತರಿಸಿದ ಕಾರು ಚಾಲಕ ಆತ್ಮಹತ್ಯೆ

ತೀವೃ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಕಾರು ಚಾಲಕರೋರ್ವರು ಆತ್ಮಹತ್ಯೆಗೆ ಶರಣಾದ ಘಟನೆ

ಲಾಕ್‌ಡೌನ್ ಸಡಿಲಿಕೆ ಬಳಿಕವೂ ಕೊರೋನಾ ಭೀತಿ ಜನರಲ್ಲಿರುವುದರಿಂದ ಹೇಗೆ ಕೆಲಸ ಮಾಡುವುದು ಎಂದು ಆತಂಕಕ್ಕೀಡಾದ ಬಗ್ಗೆ ಡೆತ್ ನೋಟ್.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಲಾಕ್‌ಡೌನ್ ನಿಂದ ತೀವೃ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಕಾರು ಚಾಲಕರೋರ್ವರು ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ. ಕಾರು ಚಾಲಕ ಕೆ.ಮಣಿ(38) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಲಾಕ್‌ಡೌನ್ ಘೋಷಣೆಯಾದ ಬಳಿಕ ಕೆಲಸವಿಲ್ಲದೇ ಮನೆಯಲ್ಲೇ ಇದ್ದ ಮಣಿ ತೀವೃ ಆರ್ಥಿಕ ತೊಂದರೆ ಅನುಭವಿಸಿದರು. ಕುಟುಂಬ ನಿರ್ವಹಣೆ ವಿಷಯದಲ್ಲಿ ಮನೆಯಲ್ಲಿ ಜಗಳವೂ ನಡೆಯುತ್ತಿತ್ತು. ಲಾಕ್‌ಡೌನ್ ಸಡಿಲಿಕೆ ಬಳಿಕವೂ ಕೊರೋನಾ ಭೀತಿ ಜನರಲ್ಲಿರುವುದರಿಂದ ಹೇಗೆ ಕೆಲಸ ಮಾಡುವುದು ಎಂದು ಆತಂಕಕ್ಕೀಡಾದ ಬಗ್ಗೆ ಡೆತ್ ನೋಟ್ ನಲ್ಲಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವರ ಮನೆಯಲ್ಲಿ ತೀವೃ ಹಣಕಾಸಿನ ಮುಗ್ಗಟ್ಟಿನಿಂದ ಊಟಕ್ಕೂ ಕಷ್ಟವಾಗಿತ್ತು ಎನ್ನಲಾಗಿದೆ.

ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Get real time updates directly on you device, subscribe now.