ಮುಂಬೈಯಿಂದ ಬಂದು ಕ್ವಾರಂಟೈನ್‌ನಲ್ಲಿದ್ದ ನವವಿವಾಹಿತ ಆತ್ಮಹತ್ಯೆ

ಎರಡು ವಾರ ಹಿಂದಷ್ಟೆ ಅಂತರ್ಜಾತಿ ವಿವಾಹವಾಗಿದ್ದ ಈತ ಪತ್ನಿಯೊಂದಿಗೆ ಮುಂಬೈನಿಂದ ಬಂದಿದ್ದು, ಕ್ವಾರಂಟೈನ್‌ಗೆ ಒಳಗಾಗಿದ್ದರು.

ಕರಾವಳಿ ಕರ್ನಾಟಕ ವರದಿ
ಬೀದರ್: ಮುಂಬೈಯಿಂದ ಬಂದು ಔರಾದ್ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ  ಕ್ವಾರಂಟೈನ್‌ಗೆ ಒಳಗಾಗಿದ್ದ ನವವಿವಾಹಿತ ನೇಣಿಗೆ ಶರಣಾಗಿದ್ದಾನೆ.

ವನಮಾರಪಳ್ಳಿಯ ಹೊರವಲಯದ ಕ್ವಾರಂಟೈನ್ ಕೇಂದ್ರದಲ್ಲಿ ನಾರಾಯಣಪುರದ ಸಚಿನ್ ಜಾಧವ್(22) ಆತ್ಮಹತ್ಯೆಗೈದಿದ್ದಾನೆ. ಎರಡು ವಾರ ಹಿಂದಷ್ಟೆ ಅಂತರ್ಜಾತಿ ವಿವಾಹವಾಗಿದ್ದ ಈತ ವಾರದ ಹಿಂದೆ ಪತ್ನಿಯೊಂದಿಗೆ ಮುಂಬೈನಿಂದ ಬಂದಿದ್ದು, ಕ್ವಾರಂಟೈನ್‌ಗೆ ಒಳಗಾಗಿದ್ದರು.

ಇಂದು ಬೆಳಿಗ್ಗೆ ಪತ್ನಿಯ ಬಳಿ ಸ್ನಾನಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದ ಸಚಿನ್, ಆ ಬಳಿಕ ನೋಡಿದ ಸಂದರ್ಭ ನೇಣು ಬಿಗಿದು ಸಾವಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಔರಾದ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Get real time updates directly on you device, subscribe now.