‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್’ ಖ್ಯಾತಿಯ ಮೆಬಿನಾ ಮೈಕೆಲ್ ಅಪಘಾತದಲ್ಲಿ ಮೃತ್ಯು

ಟ್ರ್ಯಾಕ್ಟರ್ ಮತ್ತು ಕಾರಿನ ಮುಖಾಮುಖಿ ಅಪಘಾತ ಸಂಭವಿಸಿತ್ತು. ಮೆಬಿನಾ ಅವರು ಕೊಡಗಿನ ಸೋಮವಾರ ಪೇಟೆಗೆ ತೆರಳುತ್ತಿದ್ದರು.

ಕರಾವಳಿ ಕರ್ನಾಟಕ ವರದಿ
ಮಂಡ್ಯ: ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್’ ರಿಯಾಲಿಟಿ ಶೋ ಸೀಸನ್4 ವಿಜೇತೆ ಮೆಬಿನಾ ಅವರು ಅಪಘಾತದಲ್ಲಿ ಸಾವಪ್ಪಿದ್ದಾರೆ. ನಾಗಮಂಗಲ ತಾಲೂಕಿನ ದೇವಿಹಳ್ಳಿಯ ರಾ.ಹೆ.75ರಲ್ಲಿ ಮಂಗಳವಾರ ಅಪಘಾತ ಸಂಭವಿಸಿತ್ತು.

ಕಾರಿನಲ್ಲಿ ಮೆಬಿನಾ ಸೇರಿ ಮೂವರಿದ್ದು, ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ ಸಂಜೆ ನಾಲ್ಕುವರೆ ಸುಮಾರಿಗೆ ಟ್ರ್ಯಾಕ್ಟರ್ ಮತ್ತು ಕಾರಿನ ಮುಖಾಮುಖಿ ಅಪಘಾತ ಸಂಭವಿಸಿತ್ತು. ಮೆಬಿನಾ ಅವರು ಕೊಡಗಿನ ಸೋಮವಾರ ಪೇಟೆಗೆ ತೆರಳುತ್ತಿದ್ದರು. ಆದಿಚುಂಚನಗಿರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೆಬಿನಾ ಅವರಿಗೆ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕೊಂಡು ಹೋಗುವ ಸಂದರ್ಭ ಮಾರ್ಗ ಮಧ್ಯ ಸಾವಪ್ಪಿದ್ದಾರೆ.

Get real time updates directly on you device, subscribe now.