ಬಸ್ಸಿನಲ್ಲಿ ಸಾಮಾಜಿಕ ಅಂತರ ಬೇಕಾಗಿಲ್ಲ: ಉಪ ಮುಖ್ಯಮಂತ್ರಿ ಸವದಿ

ವಿಮಾನದಲ್ಲಿ ಸೀಟ್ ಖಾಲಿ ಬಿಡಲ್ಲ. ಬೈಕಿನಲ್ಲಿ ಇಬ್ಬರು ಮೂವರು ಕೂತು ಹೋದರೂ ಪ್ರಶ್ನೆ ಮಾಡಲ್ಲ. ಬಸ್ ಪ್ರಯಾಣಿಕರ ಮೇಲೆ ಮಾತ್ರ ಯಾಕೆ ಕೆಂಗಣ್ಣು?

ಕರಾವಳಿ ಕರ್ನಾಟಕ ವರದಿ
ದಾವಣಗೆರೆ: ವಿಮಾನದಲ್ಲಿ ಸೀಟ್ ಖಾಲಿ ಬಿಡಲ್ಲ. ಬೈಕಿನಲ್ಲಿ ಇಬ್ಬರು ಮೂವರು ಕೂತು ಹೋದರೂ ಪ್ರಶ್ನೆ ಮಾಡಲ್ಲ. ಇವರೆಲ್ಲರಿಗೂ ಬಿಟ್ಟು ಕೇವಲ ಬಸ್ ಪ್ರಯಾಣಿಕರ ಮೇಲೆ ಮಾತ್ರ ಯಾಕೆ ಕೆಂಗಣ್ಣು ಎಂದು ಉಪ ಮುಖ್ಯಮಂತ್ರಿ, ಸಾರಿಗೆ ಸಚಿವರೂ ಆದ ಲಕ್ಷ್ಮಣ ಸವದಿಯವರು ಪ್ರಶ್ನಿಸಿದ್ದಾರೆ.

ಲಾಕ್‌ಡೌನ್ ಮಾಡಿರುವುದರಿಂದ ಈಗಾಗಲೇ ಸಾರಿಗೆ ಸಂಸ್ಥೆಗಳು 1800ಕೋಟಿ ರೂ.ಗಳಷ್ಟು ಭಾರೀ ನಷ್ಟ ಅನುಭವಿಸಿವೆ. ಬಸ್ಸಿನಲ್ಲಿ ಅಂತರ ಕಾಪಾಡಿಕೊಂಡು ಬಂದರೆ ಶೇ.70 ನಷ್ಟವಾಗುತ್ತದೆ. ಆದ್ದರಿಂದ ಸೀಟ್ ಖಾಲಿ ಬಿಡುವುದಿಲ್ಲ ಎಂದು ಅವರು ಬಿಎಂಟಿಸಿ ಬಸ್ಸಿನಲ್ಲಿ ಅಂತರ ಕಾಪಾಡಿಕೊಳ್ಳದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಮಹಾರಾಷ್ಟ್ರ, ಆಂಧ್ರಪ್ರದೇಶ ಮುಂತಾದ ರಾಜ್ಯಗಳಲ್ಲಿ ಕೊರೋನಾ ಸೋಂಕು ಹೆಚ್ಚಾಗಿರುವುದರಿಂದ ಸದ್ಯ ಅಂತರ ರಾಜ್ಯ ಬಸ್ ಸೇವೆ ಮುಂದೂಡಲಾಗಿದೆ ಎಂದವರು ಹೇಳಿದರು.

 

Get real time updates directly on you device, subscribe now.