ಮಂಡ್ಯ: ತಾಯಿ-ಮಗಳು ಸೇರಿ 7ಮಂದಿ ನೀರಿನಲ್ಲಿ ಮುಳುಗಿ ಮೃತ್ಯು

ಕರಾವಳಿ ಕರ್ನಾಟಕ ವರದಿ
ಮಂಡ್ಯ: ನಾಗಮಂಗಲ ತಾಲೂಕಿನ ಬೋಗಾಧಿ ಗ್ರಾ.ಪಂ. ವ್ಯಾಪ್ತಿಯ ಬೀರನಹಳ್ಳಿ ಗ್ರಾಮದ ಕೆರೆಯಲ್ಲಿ ರವಿವಾರ ಬಟ್ಟೆ ತೊಳೆಯಲು ಹೋದ ತಾಯಿ ಮತ್ತು ಇಬ್ಬರು ಪುತ್ರಿಯರು ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಬೀರನಹಳ್ಳಿ ಗ್ರಾಮದ ನರಸಿಂಹಯ್ಯ ಎಂಬವರ ಪತ್ನಿ ಗೀತಾ (40) ಪುತ್ರಿಯರಾದ  ಸವಿತಾ (19), ಸೌಮ್ಯ (14) ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.

ಒಬ್ಬರು ಸಣ್ಣಯ್ಯನ ಕಟ್ಟೆ ಕೆರೆಗೆ ಬಿದ್ದಾಗ ರಕ್ಷಿಸಲು ಪ್ರಯತ್ನಿಸಿದ ಇನ್ನಿಬ್ಬರು ಕೂಡ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ಕೆರೆ ದಡದಲ್ಲಿ ಬಟ್ಟೆಗಳನ್ನು ನೋಡಿದ ಸ್ಥಳೀಯರು ಸಂಶಯಗೊಂಡು ಕೆರೆಯಲ್ಲಿ  ಹುಡುಕಿದಾಗ ಮೃತ ದೇಹಗಳು ದೊರೆತಿವೆ.

ನಾಗಮಂಗಲ ಗ್ರಾಮಾಂತರ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.

ಬೆಳ್ಳೂರು ಠಾಣಾ ವ್ಯಾಪ್ತಿಯ ಚೋಳಸಂದ್ರ ಗ್ರಾಮದಲ್ಲಿ ಇಬ್ಬರು ಯಲದಹಳ್ಳಿ ಕೆರೆಯಲ್ಲಿ  ಬಟ್ಟೆ ತೊಳೆಯಲು ಹೋದ ಸಂದರ್ಭ ಕಾಲು ಜಾರಿ ಬಿದ್ದು ಮೃತರಾದ ಘಟನೆ ನಡೆದಿದೆ.

ಗಂಗಾಧರ ಎಂಬುವರ ಪುತ್ರಿ ರಶ್ಮಿ(23) ಹಾಗೂ ರಶ್ಮಿಯ ಅಕ್ಕನ ಮಗಳು, ನಿರಂಜನ್ ಕುಮಾರ್  ಎಂಬವರ ಪುತ್ರಿ ಇಂಚರ(7) ಮೃತಪಟ್ಟಿದ್ದಾರೆ.

ಹೇಮಾವತಿ ನಾಲೆಯಲ್ಲಿ ಜಾನುವಾರುಗಳ ಮೈ ತೊಳೆಯಲು ಹೋಗಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕೆ.ಆರ್.ಪೇಟೆ ತಾಲೂಕಿನ ಕಸಬಾ ಹೋಬಳಿಯ ಹುರುಳಿ ಗಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕುಮಾರ – ಅಭಿಷೇಕ್

ಆದಿಹಳ್ಳಿಯ ಜವರೇಗೌಡರ ಮಗ ಕುಮಾರ(25) ಮತ್ತು ಸ್ವಾಮಿಗೌಡ ಎಂಬವರ ಮಗ ಅಭಿಷೇಕ್(15) ಮೃತಪಟ್ಟವರು.

ಅಭಿಷೇಕ್ ಕಾಲುವೆಯ ಹೊಂಡದಲ್ಲಿ ನೀರಿನಲ್ಲಿ ಮುಳುಗಿದಾಗ ರಕ್ಷಿಸಲು ಯತ್ನಿಸಿದ ಕುಮಾರ ಕೂಡ ನೀರಿನಲ್ಲಿ ಮುಳುಗಿ ಸಾವಪ್ಪಿದ್ದಾರೆ. ಕುಮಾರ ಅವರು ತನ್ನ ಸಹೋದರಿಯ ಮನೆಗೆ ಬಂದಿದ್ದ ಸಂದರ್ಭ ಈ ಘಟನೆ ನಡೆದಿದೆ.

ಕಿಕ್ಕೇರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 

 

Get real time updates directly on you device, subscribe now.