ಐ.ಎಂ.ಎ ಹಗರಣದ ಆರೋಪಿ, ಐ.ಎ.ಎಸ್ ಅಧಿಕಾರಿ ಬಿ.ಎಂ.ವಿಜಯ ಶಂಕರ ಆತ್ಮಹತ್ಯೆ

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಬಹುಕೋಟಿ ಐ.ಎಂ.ಎ ವಂಚನೆ ಪ್ರಕರಣದಲ್ಲಿ ಲಂಚ ಪಡೆದ ಆರೋಪ ಎದುರಿಸುತ್ತಿದ್ದ ಐ.ಎ.ಎಸ್. ಅಧಿಕಾರಿ  ಬಿ.ಎಂ. ವಿಜಯ್ ಶಂಕರ್(54) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಂಗಳವಾರ ಸಂಜೆ ಜಯನಗರದ ಬಿಎಂಟಿಸಿ ಬಸ್ ಘಟಕದ  ಹಿಂಬದಿಯ ರಸ್ತೆಯಲ್ಲಿದ್ದ ಅವರ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮನೆಯಲ್ಲಿ ಪತ್ನಿ ಮತ್ತು ಮಗಳು ಇದ್ದರು ಎನ್ನಲಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ.

ಐ.ಎಂ.ಎ  ಕಂಪೆನಿಯ ಮಾಲಕ ಮನ್ಸೂರ್ ಖಾನ್ ನಿಂದ 1.5 ಕೋಟಿ ರೂಪಾಯಿಗಳ ಲಂಚ ಪಡೆದಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ವಿಜಯ್ ಶಂಕರ್ ಅವರನ್ನು ಜುಲೈ8, 2019rರಂದು ವಿಶೇಷ ತನಿಖಾ ತಂಡ ಬಂಧಿಸಿದ್ದು, ಅವರು ಜೈಲುವಾಸ ಅನುಭವಿಸಿದ್ದರು. ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

ವಿಜಯ್ ಶಂಕರ್ ಅವರು ಹಿಂದೆ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

ತಿಲಕ್ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Get real time updates directly on you device, subscribe now.