ಅಂಬುಲೆನ್ಸ್‌ಗಾಗಿ ಕಾದು ರಸ್ತೆಯಲ್ಲೇ ಮೃತಪಟ್ಟ ಕೊರೋನಾ ಸೋಂಕಿತ: ಮಳೆಯಲ್ಲೇ ನೆನೆದ ಮೃತದೇಹ

ಮನೆ ಸಮೀಪದ ಬಸ್ ನಿಲ್ದಾಣದಲ್ಲಿ ಉಸಿರಾಡಲು ಆಗದೇ ಬಳಲಿದ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದರು.

ಮಳೆ ನಡುವೆ ಶವದ ಅಂತ್ಯಸಂಸ್ಕಾರ ಮಾಡಲು ಕೂಡ ಆಗದೇ ಕುಟುಂಬ ಸದಸ್ಯರು ಮೂರು ಗಂಟೆ ಕಾಲ ರಸ್ತೆಯ ಮೇಲೆ ಶವ ಇಟ್ಟು ಆಕ್ರಂದನಗೈಯುತ್ತಿದ್ದರು.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು:
ಬೆಳಿಗ್ಗೆಯಿಂದ ಸಂಜೆ ತನಕ ಕೊರೋನಾ ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ಒಯ್ಯಲು ಅಂಬುಲೆನ್ಸ್ ಬಾರದ ಕಾರಣ ವ್ಯಕ್ತಿ ಸಾವಪ್ಪಿದ ಖೇದಕರ ಸಂಗತಿ ಶುಕ್ರವಾರ ವರದಿಯಾಗಿದೆ.

ಶ್ರೀನಗರದ ರಾಮಾಂಜನೇಯ ದೇವಸ್ಥಾನದ ರಸ್ತೆಯ 56 ವರ್ಷದ ವ್ಯಕ್ತಿ ಮರಣ ಹೊಂದಿದ ನಾಲ್ಕು ಗಂಟೆ ಬಳಿಕ ಶವ ಕೊಂಡುಹೋಗಲು ಅಂಬುಲೆನ್ಸ್ ಬಂದಿತ್ತು. ಮಳೆ ನಡುವೆ ಶವದ ಅಂತ್ಯಸಂಸ್ಕಾರ ಮಾಡಲು ಕೂಡ ಆಗದೇ ಕುಟುಂಬ ಸದಸ್ಯರು ಮೂರು ಗಂಟೆ ಕಾಲ ರಸ್ತೆಯ ಮೇಲೆ ಶವ ಇಟ್ಟು ಆಕ್ರಂದನಗೈಯುತ್ತಿದ್ದರು.

ಮೂರು ದಿನಗಳ ಹಿಂದೆ ಕೊರೋನಾ ಪರೀಕ್ಷೆ ನಡೆಸಿದ್ದ ವ್ಯಕ್ತಿಗೆ ಶುಕ್ರವಾರ ಕೊರೋನಾ ಸೋಂಕಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅಂಬುಲೆನ್ಸ್ ಕಳಿಸಲು ಮನೆಯವರು ಆಸ್ಪತ್ರೆಯವರಿಗೆ ಫೋನ್ ಮಾಡಿದ್ದು, ಒಂದು ಕೊಡೆಯೊಂದಿಗೆ ಮತ್ತು ಎರಡು ವಾರಗಳಿಗಾಗುವ ಬಟ್ಟೆಗಳೊಂದಿಗೆ ಮನೆ ಸಮೀಪದ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು. ಉಸಿರಾಡಲು ಆಗದೇ ಬಳಲಿದ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದರು.

ಸಂಜೆ 7:30ಸುಮಾರಿಗೆ ಬಂದ ಆ್ಯಂಬುಲೆನ್ಸ್ ಶವವನ್ನು ತೆಗೆದುಕೊಂಡು ಹೋಗಿದೆ ಎನ್ನಲಾಗಿದೆ.

ಆಟೋ ಚಾಲಕರಾಗಿದ್ದ ಮೃತ ವ್ಯಕ್ತಿ ಲಾಕ್‌ಡೌನ್ ಸಂದರ್ಭ ತೀವೃ ಸಂಕಷ್ಟಕ್ಕೀಡಾಗಿದ್ದರು ಎನ್ನಲಾಗಿದೆ. ಮಧುಮೇಹದಿಂದ ಬಳಲಿದ್ದರು.

.

Get real time updates directly on you device, subscribe now.