ನಟ ಸುಶೀಲ್ ಕುಮಾರ್ ಆತ್ಮಹತ್ಯೆ

ಕರಾವಳಿ ಕರ್ನಾಟಕ ವರದಿ
ಮಂಡ್ಯ: ಕನ್ನಡ ಸಿನಿಮಾ ಸಹನಟ ಸುಶೀಲ್ ಕುಮಾರ್(30) ಇಂಡುವಾಳ ಗ್ರಾಮದ ಸ್ನೇಹಿತನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ.

ಮಂಡ್ಯದ ವಿವಿ ನಗರ ಬಡಾವಣೆ ನಿವಾಸಿಯಾಗಿದ್ದ ಸುಶೀಲ್ ಕುಮಾರ್ ಅವರು ಬೆಂಗಳೂರಲ್ಲಿ ಜಿಮ್ ಟ್ರೈನರ್ ಆಗಿದ್ದರು.

ಸಲಗ, ಕಮರೊಟ್ಟು ಚೆಕ್ ಪೋಷ್ಠ್ ಸಿನಿಮಾಗಳಲ್ಲಿ ನಟಿಸಿದ್ದ ಸುಶೀಲ್ ನಿಧನಕ್ಕೆ ಕನ್ನಡ ನಟ ದುನಿಯಾ ವಿಜಯ್ ಕಂಬನಿ ಮಿಡಿದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಬರೆದಿದ್ದಾರೆ.

ಕಳೆದ ಮೂರು ತಿಂಗಳಿಂದ ಲಾಕ್‌ಡೌನ್ ನಿಂದ ಜಿಮ್ ತೆರೆಯದ ಕಾರಣ ಮನೆಯಲ್ಲಿದ್ದ ಸುಶೀಲ್ ಕುಮಾರ್ ಆತ್ಮಹತ್ಯೆಯ ಕಾರಣ ಇನ್ನಷ್ಟೇ ತಿಳಿಯಬೇಕಿದೆ.  ಸುಶೀಲ್ ಕುಮಾರ್ ಅವರು ಅಂತ:ಪುರ ಧಾರವಾಹಿ ಮೂಲಕ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತರಾಗಿದ್ದರು.

ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 

Get real time updates directly on you device, subscribe now.