ಆಟವಾಡುತ್ತಿದ್ದಾಗ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕಿ

ಕರಾವಳಿ ಕರ್ನಾಟಕ ವರದಿ
ಬೆಂಗಳೂರು:  ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯೊಬ್ಬಳು ಆಯತಪ್ಪಿ ಬಿದ್ದು ಮಾರತಹಳ್ಳಿಯ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿರುವ ಘಟನೆ ಶುಕ್ರವಾರ ನಗರದ ಮಂತ್ರಿ ಅಪಾರ್ಟ್​ಮೆಂಟ್​ ಬಳಿ ನಡೆದಿದೆ.

ಅಸ್ಸಾಂ ಮೂಲದ ನಿತ್ಯಾನಂದ ಎಂಬವರ ಪುತ್ರಿ ಮೊನಾಲಿಕಾ(6) ನೀರಿನಲ್ಲಿ ಕೊಚ್ಚಿಹೋಗಿದ್ದಾಳೆ.

ನಿತ್ಯಾನಂದ ಅವರ ಕುಟುಂಬ ಮಂತ್ರಿ ಅಪಾರ್ಟ್​ಮೆಂಟ್​ ಹಿಂಭಾಗದ ಗುಡಿಸಿಲಿನಲ್ಲಿ ವಾಸವಾಗಿತ್ತು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಟವಾಡುವ ಸಂದರ್ಭ ಆಯ ತಪ್ಪಿ ಪಕ್ಕದಲ್ಲಿದ್ದ ಕಾಲುವೆಗೆ ಮೊನಾಲಿಕಾ ಬಿದ್ದಿದ್ದಾಳೆ. ಮನೆಯವರ ಕಣ್ಣೆದುರೇ ಕೊಚ್ಚಿ ಹೋಗಿದ್ದಾಳೆ.

 

 

Get real time updates directly on you device, subscribe now.