ಮುಂಬೈ ನಗರದಲ್ಲಿ ವಿಮಾನ ಪತನ: ಪೈಲಟ್ ಸೇರಿದಂತೆ ಕನಿಷ್ಟ ಐದು ಮಂದಿ ದುರ್ಮರಣ

12 ಆಸನಗಳ ಸಾಮರ್ಥ್ಯದ ಸಣ್ಣ ವಿಮಾನ

ಮುಂಬೈ ಉಪನಗರಿ ಘಾಟ್ಕೋಪರ್‌ನಲ್ಲಿ ವಿಮಾನವೊಂದು ಭೂಸ್ಪರ್ಶಕ್ಕೆ ಕೆಲವೆ ನಿಮಿಷಗಳ ಮುಂಚೆ ಪತನವಾಗಿದ್ದು ಐವರು ಸಾವಿಗೀಡಾಗಿದ್ದಾರೆ.

ಮುಂಬೈ: ಮುಂಬೈ ಉಪನಗರಿ ಘಾಟ್ಕೋಪರ್‌ನಲ್ಲಿ ವಿಮಾನವೊಂದು ಭೂಸ್ಪರ್ಶಕ್ಕೆ ಕೆಲವೆ ನಿಮಿಷಗಳ ಮುಂಚೆ ಪತನವಾಗಿದ್ದು ಐವರು ಸಾವಿಗೀಡಾಗಿದ್ದಾರೆ.

ಜನನಿಬಿಡ ಪ್ರದೇಶವಾದ ಘಾಟ್ಕೋಪರ್‌ನ ನಿರ್ಮಾಣ ಹಂತದ ಕಟ್ಟಡದ ಮೇಲೆ ವಿಮಾನ ಪತನಗೊಂಡಿದ್ದು ಓರ್ವ ಪಾದಚಾರಿ ಸೇರಿದಂತೆ ಐವರು ಮೃತಪಟ್ಟಿದ್ದಾರೆ. ವಿಮಾನ ಪತನಗೊಂಡ ತಕ್ಷಣವೆ ಬೆಂಕಿಗೆ ಆಹುತಿಯಾಗಿದ್ದು ಒಳಗಿದ್ದ ಮೂವರು ಪ್ರಯಾಣೀಕರು ಮತ್ತು ಪೈಲಟ್ ಸಜೀವ ದಹನಗೊಂಡಿದ್ದಾರೆ.

12 ಆಸನಗಳ ಸಾಮರ್ಥ್ಯದ ಸಣ್ಣ ವಿಮಾನ ಉತ್ತರ ಪ್ರದೇಶದಿಂದ ಹೊರಟು ಮುಂಬೈಗೆ ತಲುಪಬೇಕಾಗಿತ್ತು. ಈ ವೇಳೆ ಮುಂಬೈ ತಲುಪಿ ರನ್‌ವೇಯಲ್ಲಿ ಭೂಸ್ಪರ್ಶ ಮಾಡುವ ಕೆಲವೇ ನಿಮಿಷಗಳ ಮೊದಲು ವಿಮಾನ ಹಠಾತ್ ನೆಲಕ್ಕೆ ಅಪ್ಪಳಿಸಿದೆ. ಸುತ್ತಮುತ್ತಲು ಗಗನಚುಂಬಿ ಕಟ್ಟಡಗಳಿದ್ದು ವಿಮಾನವೇನಾದರೂ ಆ ಕಟ್ಟಡಗಳಿಗೆ ಬಡಿದಿದ್ದರೆ ಭಾರಿ ಅನಾಹುತವಾಗುವ ಸಂಭವಿವಿತ್ತು.

ವಿಮಾನ ಪತನಗೊಂಡ ತಕ್ಷಣವೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸಪಡುತ್ತಿದ್ದಾರೆ.

ಚಿತ್ರಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್

ಈ ವಿಮಾನ ಈ ಮೊದಲು ಉತ್ತರ ಪ್ರದೇಶದ ಸರ್ಕಾರದ ಒಡೆತನದಲ್ಲಿತ್ತು ಎನ್ನಲಾಗಿದೆ. ಎರಡು ವರ್ಷಗಳ ಹಿಂದಷ್ಟೆ ಈ ವಿಮಾನವನ್ನು ಖಾಸಗಿ ವಿಮಾನಯಾನ ಕಂಪೆನಿಯೊಂದಕ್ಕೆ ಮಾರಾಟ ಮಾಡಲಾಗಿತ್ತು.

Get real time updates directly on you device, subscribe now.