SFI ಸಂಘಟನೆಯ ವಿದ್ಯಾರ್ಥಿ ಕೊಲೆ: ಕೊಲೆ ಹಿಂದೆ PFI ಕೈವಾಡ ಎಂದಿದೆ

ದ್ವಿತೀಯ ವರ್ಷದ ಬಿಎಸ್ಸಿ ವಿದ್ಯಾರ್ಥಿ ಅಭಿಮನ್ಯು (20) ಮೃತಪಟ್ಟ SFI ನಾಯಕ

ಮಹಾರಾಜಾಸ್ ಕಾಲೇಜಿನ ಹಾಸ್ಟೆಲ್ ಒಂದರಲ್ಲಿ ಎಸ್.ಎಫ್.ಐ ವಿದ್ಯಾರ್ಥಿ ಸಂಘಟನೆಯ ಯುವಕನನ್ನು ಇರಿದು ಕೊಲೆಗೈಯಲಾದ ಕಳವಳಕಾರಿ ಘಟನೆ ವರದಿಯಾಗಿದೆ.

ಕೊಚ್ಚಿ: ಮಹಾರಾಜಾಸ್ ಕಾಲೇಜಿನ ಹಾಸ್ಟೆಲ್ ಒಂದರಲ್ಲಿ ಎಸ್.ಎಫ್.ಐ ವಿದ್ಯಾರ್ಥಿ ಸಂಘಟನೆಯ ಯುವಕನನ್ನು ಇರಿದು ಕೊಲೆಗೈಯಲಾದ ಕಳವಳಕಾರಿ ಘಟನೆ ವರದಿಯಾಗಿದೆ.

(ಸಿಪಿಐ(ಎಂ) ವಿದ್ಯಾರ್ಥಿ ಸಂಘಟನೆ ಎಸ್.ಎಫ್.ಐ ಸದಸ್ಯ, ದ್ವಿತೀಯ ವರ್ಷದ ಬಿಎಸ್ಸಿ ರಸಾಯನ ಶಾಸ್ತ್ರ ವಿದ್ಯಾರ್ಥಿ ಅಭಿಮನ್ಯು (20)ಅವರು ಇರಿತದಿಂದ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಭಿಮನ್ಯು ಅವರು ಇಡುಕ್ಕಿ ಯ ಮರಯೂರ್ ನಿವಾಸಿಯಾಗಿದ್ದರು.

ಎಸ್.ಎಫ್.ಐ ಸಂಘಟನೆಯ ಇನ್ನೋರ್ವ ಯುವಕ ಹತ್ತೊಂಬತ್ತರ ಹರಯದ ಅರ್ಜುನ್ ಗಂಭೀರ ಗಾಯಗೊಂಡಿದ್ದು, ಎರ್ನಾಕುಲಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರ್ಜುನ್ ಅವರು ಬಿಎಸ್ಸಿ ತತ್ವಶಾಸ್ತ್ರದ ವಿದ್ಯಾರ್ಥಿ
ಘಟನೆ ಸಂಬಂಧ ಕೊಟ್ಟಾಯಂ ನಿವಾಸಿ ಬಿಲಾಲ್, ಫಾರೂಕ್ ಮತ್ತು ಕೊಚ್ಚಿ ಪೋರ್ಟ್ ನಿವಾಸಿ ರಿಯಾಝ್ ಎಂಬ ಮೂವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಪಿ.ಎಫ್.ಐ ಸಂಘಟನೆಯ ವಿದ್ಯಾರ್ಥಿ ಘಟಕ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮತ್ತು ಎಸ್.ಎಫ್.ಐ ಸಂಘಟನೆಯ ವಿದ್ಯಾರ್ಥಿಗಳ ನಡುವೆ ರವಿವಾರ ನಡೆದ ಮಾರಾಮಾರಿ ಸಂದರ್ಭ ಈ ಘಟನೆ ನಡೆದಿದ್ದು, ಕೇರಳ ತಲ್ಲಣಗೊಂಡಿದೆ.

ಫೋಸ್ಟರ್ ಅಂಟಿಸುವ ಬಗ್ಗೆ ಎರಡು ವಿದ್ಯಾರ್ಥಿ ಸಂಘಟನೆಗಳ ನಡುವಿನ ವೈಮನಸ್ಸು ರವಿವಾರ ರಾತ್ರಿ ಓರ್ವ ವಿದ್ಯಾರ್ಥಿಯ ಕೊಲೆಗೆ ಕಾರಣವಾಗಿದೆ ಎನ್ನಲಾಗಿದೆ. ಕೊಲೆಯಾದ ಅಭಿಮನ್ಯು ಅವರು ಹೊಸ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಪೋಸ್ಟರ್ ಅಂಟಿಸುವಾಗ ಅವರನ್ನು ಹತ್ಯೆಗೈಯಲಾಗಿದೆ.

ಮಾರ್ಕ್ಸ್ ವಾದಿ ಪಕ್ಷದ ಶಾಸಕ ಎಂ. ಸ್ವರಾಜ್ ಅವರು ಘಟನೆಯನ್ನು ತೀವೃವಾಗಿ ಖಂಡಿಸಿದ್ದು, ಇದು ಕ್ರಿಮಿನಲ್ ಗಳ ಕೃತ್ಯ ಎಂದಿದ್ದಾರೆ. ಹೊರ ಜಿಲ್ಲೆಗಳ ತರಬೇತಿ ಹೊಂದಿದ ಕ್ರಿಮಿನಲ್ ವ್ಯಕ್ತಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಪವಿತ್ರ ರಮ್ಝಾನ್ ಮಾಸದಲ್ಲಿ ಅಲುವದಲ್ಲಿ ಪೊಲೀಸರ ಮೇಲೆ ಹಲ್ಲೆಗೈದ ಕ್ರಿಮಿನಲ್ ಮನಸ್ಥಿತಿಯ ಜನರ ಬಗ್ಗೆ ನಿಮಗೆ ತಿಳಿದಿರಬಹುದು ಎಂದಿರುವ ಸ್ವರಾಜ್ ಅವರು ಘಟನೆಯಲ್ಲಿ ವಿದ್ಯಾರ್ಥಿಗಳ ಜೊತೆ ಹೊರಗಿನವರು ಕೈಜೋಡಿಸಿ ಎಸ್.ಎಫ್.ಐ ವಿದ್ಯಾರ್ಥಿ ಮುಖಂಡನನ್ನು ಕೊಲೆಗೈದಿದ್ದಾರೆ ಎಂದು ಆರೋಪಿಸಿದ್ದಾರೆ.

ಪೊಲೀಸರು ವಶಕ್ಕೆ ಪಡೆದಿರುವ ಆರೋಪಿಗಳಲ್ಲಿ ಓರ್ವ ವಿದ್ಯಾರ್ಥಿ ಕಳೆದ ವಾರವಷ್ಟೇ ಕಾಲೇಜಿಗೆ ಸೇರಿದ್ದು, ಇನ್ನೋರ್ವ ಇನ್ನೂ ಕಾಲೇಜು ಸೇರಲಿಕ್ಕಿತ್ತು.

ಎಸ್.ಎಫ್.ಐ ತನ್ನ ಮುಖಂಡನ ಕೊಲೆಗೆ ಎನ್.ಡಿ.ಎಫ್(ಪಿ.ಎಫ್.ಐ-ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಕಾರಣ ಎಂದು ಕಿಡಿಕಾರಿದೆ. ನಮ್ಮ ಸಂಗಾತಿಗೆ ಕೆಂಪು ವಂದನೆಗಳು ಎಂದು ಎಸ್.ಎಫ್.ಐ ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.