300ಕ್ಕೂ ಹೆಚ್ಚು ಕನ್ನಡಿಗರನ್ನೂ ಒಳಗೊಂಡು 500ರಷ್ಟು ಮಾನಸ ಸರೋವರ ಯಾತ್ರಿಗಳು ಸಂಕಷ್ಟದಲ್ಲಿ

ವಿಮಾನ ಸೇವೆ ರದ್ದುಗೊಂಡಿದ್ದರಿಂದ ಹೃದಯಾಘಾತವಾಗಿ 56 ವರ್ಷದ ಲೀಲಾ ನಂಬೊದಿರಿಪಾದ್ ಸಾವು

ಭಾರತದಿಂದ ನೇಪಾಳದಲ್ಲಿರುವ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದ ಸುಮಾರು 500ಕ್ಕೂ ಹೆಚ್ಚಿನ ಯಾತ್ರಾರ್ಥಿಗಳು ಮಾರ್ಗ ಮಧ್ಯದಲ್ಲಿ ಸಿಮಿಕೊಟ್ ಬಳಿ ಸಿಲುಕಿ ಹಾಕಿಕೊಂಡಿದ್ದು, ಪ್ರತಿಕೂಲ ವಾತವಾರಣದಿಂದಾಗಿ ಈ ಭಾಗದಲ್ಲಿನ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಚೆನ್ನೈ: ಭಾರತದಿಂದ ನೇಪಾಳದಲ್ಲಿರುವ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದ ಸುಮಾರು 500ಕ್ಕೂ ಹೆಚ್ಚಿನ ಯಾತ್ರಾರ್ಥಿಗಳು ಮಾರ್ಗ ಮಧ್ಯದಲ್ಲಿ ಸಿಮಿಕೊಟ್ ಬಳಿ ಸಿಲುಕಿ ಹಾಕಿಕೊಂಡಿದ್ದು, ಪ್ರತಿಕೂಲ ವಾತವಾರಣದಿಂದಾಗಿ ಈ ಭಾಗದಲ್ಲಿನ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ.

ವಿಮಾನ ಸೇವೆ ರದ್ದುಗೊಂಡಿದ್ದರಿಂದ ಹೃದಯಾಘಾತವಾಗಿ 56 ವರ್ಷದ ಲೀಲಾ ನಂಬೊದಿರಿಪಾದ್ ಸಾವನ್ನಪ್ಪಿದ್ದಾರೆ. ಅಲ್ಲಿ ಆಮ್ಲಜನಕ ಪ್ರಮಾಣ ತುಂಬಾ ಕಡಿಮೆ ಮಟ್ಟದಲ್ಲಿ ಇದುದ್ದರಿಂದ ಅವರು ಸಾವನ್ನಪ್ಪಿದ್ದಾರೆ.

ನಿನ್ನೆಯೇ ಭಾರತಕ್ಕೆ ಹೋಗಬೇಕಿತ್ತು, ಆದರೆ, ವಿಮಾನ ಸೇವೆ ರದ್ದುಗೊಂಡರಿಂದ ಹೋಗಲು ಸಾಧ್ಯವಾಗಲಿಲ್ಲ ಎಂದು ಲೀಲಾ ಪತಿ ಸೇತು ಮಾಧವನ್ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಹೇಳಿಕೊಂಡಿದ್ದಾರೆ.

ಕೇರಳದ ಮಲ್ಲಪುರಂ ಜಿಲ್ಲೆಯ ವಂಡೂರ್ ಪಟ್ಟಣದ ಈ ದಂಪತಿ 41 ಮಂದಿ ಜೊತೆಗೆ ಕೈಲಾಸ ಮನಸ ಸರೋವರ ಯಾತ್ರೆಯನ್ನು ಜೂನ್ 22 ರಂದು ಕೈಗೊಂಡಿತ್ತು. ನಿನ್ನೆದಿನ ಅಲ್ಲಿಂದ ವಾಪಾಸ್ ಬರಬೇಕಾಗಿತ್ತು. ಸಿಮ್ ಕೋಟ್ ನಿಂದ ನೇಪಾಲ್ ಗುಂಜ್ ಮಾರ್ಗವಾಗಿ ಕಠ್ಮಂಡುವಿಗೆ ತೆರಳಲು ವಿಮಾನಕ್ಕಾಗಿ ಅವರು ಕಾಯುತ್ತಿದ್ದಾರೆ.

ರಸ್ತೆ ಬದಿಯ ಅಂಗಡಿ ಹಾಗೂ ಹೋಟೆಲ್ ಗಳೇ ಅವರ ತಾತ್ಕಾಲಿಕ ವಾಸ್ತವ್ಯದ ತಾಣಗಳಾಗಿವೆ. ಹವಾಮಾನ ವೈಫರೀತ್ಯದಿಂದ ತುಂಬಾ ತೊಂದರೆಯಾಗಿದ್ದು, ಅದರಲ್ಲೂ ವೃದ್ದ ಯಾತ್ರಾರ್ಥಿಗಳಂತೂ ತೀವ್ರ ರೀತಿಯ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಸದ್ಯಕ್ಕೆ ಊಟ , ವಸತಿ ಸಿಗುತ್ತಿದೆ ಆದರೆ. ಒಂದು ವಾರದಿಂದಲೂ ಒಂದೇ ಬಟ್ಟೆ ಧರಿಸಿರುವುದಾಗಿ ವಿಲಿವಕ್ಕಂನ ನಿವಾಸಿ ದೀನಾದಯಾಳನ್ ಹೇಳುತ್ತಾರೆ. ಅವರು ಜೂನ್ 20 ರಿಂದ ಚೆನ್ನೈಯಿಂದ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದರು.

ಈ ಮಧ್ಯೆ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.. ಅವರು ಒಬ್ಬರಿಗೆ 11 ಸಾವಿರ ರೂಪಾಯಿಯಂತೆ ವಿಶೇಷ ವಿಮಾನ , ಹೆಲಿಕಾಪ್ಟರ್ ವ್ಯವಸ್ಥೆ ಮಾಡುತ್ತಿದ್ದಾರೆ. ಆದಾಗ್ಯೂ, ಆ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.

2016 ಮೇ ತಿಂಗಳಲ್ಲೂ ಇಂತಹದೇ ಪರಿಸ್ಥಿತಿ ಸಂಭವಿಸಿತ್ತು. ಸಿಮಿಕೊಟ್ ಹಾಗೂ ಹಿಲ್ಸಾ ಬಳಿ ಸುಮಾರು 500 ಯಾತ್ರಾರ್ಥಿಗಳು ಮಾರ್ಗ ಮಧ್ಯ ಸಿಲುಕಿ ಹಾಕಿಕೊಂಡಿದ್ದರು. ಈ ಭಾಗದಲ್ಲಿ ರಸ್ತೆ ಸಂಪರ್ಕ ಕ್ಷೀಣಿಸಿದ್ದು, ಯಾತ್ರಾರ್ಥಿಗಳು ವಿಮಾನದ ಮೂಲಕ ತೆರಳಬೇಕಾಗಿದೆ.

Get real time updates directly on you device, subscribe now.