ಕಾಶ್ಮೀರದಲ್ಲಿ ಪೊಲೀಸ್ ಪೇದೆಯನ್ನು ಅಪಹರಿಸಿ ಹತ್ಯೆ ಮಾಡಿದ ಉಗ್ರಗಾಮಿಗಳು

ಪೊಲೀಸ್ ಪೇದೆಯನ್ನು ಜಾವೇದ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ. ಇಲ್ಲಿನ ಶೋಪಿಯಾನದ ಬಳಿ ಮೆಡಿಕಲ್ ಶಾಪ್ ಒಂದರಿಂದ ಜಾವೇದ್‌ರನ್ನು ಅಪಹರಿಸಲಾಗಿತ್ತು.

ಶ್ರೀನಗರ: ಕಣಿವೆ ರಾಜ್ಯದಲ್ಲಿ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಪೊಲೀಸ್ ಪೇದೆಯೊಬ್ಬರ ಶವ ಜಮ್ಮು ಕಾಶ್ಮೀರದ ಕುಲ್ಗಾಮ್ ನ ಪರಿವಾನ್ ಎಂಬಲ್ಲಿ ಪತ್ತೆಯಾಗಿದೆ.

ಪೊಲೀಸ್ ಪೇದೆಯನ್ನು ಜಾವೇದ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ. ಇಲ್ಲಿನ ಶೋಪಿಯಾನದ ಬಳಿ ಮೆಡಿಕಲ್ ಶಾಪ್ ಒಂದರಿಂದ ಜಾವೇದ್‌ರನ್ನು ಅಪಹರಿಸಲಾಗಿತ್ತು. ಜು.5 ರಂದು ಘಟನೆ ನಡೆದಿದ್ದು ಇದೀಗ ಅವರ ಮೃತದೇಹ ಪತ್ತೆಯಾಗಿದೆ.

ಇತ್ತೀಚೆಗಷ್ಟೇ ಭಾರತೀಯ ಸೇನೆಯ ಯೋಧ ಔರಂಗಜೇಬ್ ಎಂಬುವವರನ್ನು ಅಪಹರಿಸಿದ್ದ ಉಗ್ರರು ಅವರಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ವಿಡಿಯೋವನ್ನು ಸಾಮಾಜಿ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದರು. ಇದಾದ ನಂತರ ಉಗ್ರ ದಮನಕ್ಕೆ ಬಿಗಿಪಟ್ಟಾಗಿ ನಿಂತ ಭಾರತ, ನಾಲ್ವರು ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿತ್ತು.

Get real time updates directly on you device, subscribe now.