ಪ್ರೀತಿಗಾಗಿ ಗುಂಡಿಟ್ಟುಕೊಂಡ ಬಿಜೆಪಿ ಯುವ ನಾಯಕನ ಅಂಗಾಂಗ ದಾನ!

ಪ್ರೀತಿ ಸಾಬೀತುಪಡಿಸಲು ಪ್ರೇಯಸಿಯ ಅಪ್ಪನ ಸವಾಲು ಸ್ವೀಕರಿಸಿ ತನಗೆ ತಾನೆ ಶೂಟ್ ಮಾಡಿಕೊಂಡ ಬಿಜೆಪಿ ಯುವ ಮೋರ್ಚಾ ನಾಯಕ ಸಾವನ್ನಪ್ಪಿದ್ದು ಅವರ ಹೃದಯ ಸೇರಿದಂತೆ ಅಹಲವು ಅಂಗಾಂಗಗಳನ್ನು ದಾನ ಮಾಡಲಾಗಿದೆ.

ಭೋಪಾಲ್‌: ಪ್ರೀತಿ ಸಾಬೀತುಪಡಿಸಲು ಪ್ರೇಯಸಿಯ ಅಪ್ಪನ ಸವಾಲು ಸ್ವೀಕರಿಸಿ ತನಗೆ ತಾನೆ ಶೂಟ್ ಮಾಡಿಕೊಂಡ ಬಿಜೆಪಿ ಯುವ ಮೋರ್ಚಾ ನಾಯಕ ಸಾವನ್ನಪ್ಪಿದ್ದು ಅವರ ಹೃದಯ ಸೇರಿದಂತೆ ಅಹಲವು ಅಂಗಾಂಗಗಳನ್ನು ದಾನ ಮಾಡಲಾಗಿದೆ. ಪ್ರೀತಿಸಿದ ಹೃದಯ ಕೊನೆಗೂ ಸಿಗದೆ ಮರಣಾನಂತರ ಅತುಲ್ ಲೋಖಂಡೆಯ ಹೃದಯ ಬೇರೊಂದು ಜೀವ ಉಳಿಸುವ ಕೆಲಸ ಮಾಡಿದೆ.

30ರ ಹರೆಯದ ಯುವಕ ಅತುಲ್‌ ಲೋಖಂಡೆಯ ಮಿದುಳು ನಿಷ್ಕ್ರಿಯ ಆಗಿರುವುದನ್ನು ವೈದ್ಯರು ಖಚಿತಪಡಿಸಿದ ಬಳಿಕ ಆತನ ಮನೆಯವರು ಆತನ ಅನೇಕ ಪ್ರಮುಖ ಅಂಗಾಂಗಳನ್ನು ದಾನವಾಗಿ ನೀಡುವ ನಿರ್ಧಾರ ಮಾಡಿದರು.

ಅತುಲ್ ಲೋಖಂಡೆಯ ಮೃತ ದೇಹವನ್ನು ಏರ್‌ ಅಂಬುಲೆನ್ಸ್‌ ಮೂಲಕ ದಿಲ್ಲಿಯ ಏಮ್ಸ್‌ ಆಸ್ಪತ್ರೆಗೆ ರವಾನಿಸಲಾಯಿತು. ಆತನ ಹೃದಯವನ್ನು ಸಾಗಿಸುವ ವಾಹನಕ್ಕೆ ಇಂದು ಬೆಳಗ್ಗೆ ಆಸ್ಪತ್ರೆ ಮತ್ತು ವಿಮಾನ ನಿಲ್ದಾಣದ ನಡುವೆ ಕೂಡಲೇ ಗ್ರೀನ್‌ ಕಾರಿಡಾರ್‌ ನಿರ್ಮಿಸಲಾಯಿತು.

“ನನ್ನ ಮಗಳನ್ನು ನೀನು ಪ್ರೀತಿಸುವುದು ನಿಜವಾದರೆ ನಿನಗೆ ನೀನೆ ಶೂಟ್ ಮಾಡಿಕೊಂಡು ನಿನ್ನ ಪ್ರೀತಿಯನ್ನು ಸಾಬೀತು ಮಾಡು” ಎಂದು ಪ್ರೇಯಸಿಯ ತಂದೆ ಎಸೆದ ಸವಾಲನ್ನು ಸ್ವೀಕರಿಸಿ ತನಗೆ ತಾನೆ ಗುಂಡಿಟ್ಟುಕೊಂಡ ಬಿಜೆಪಿ ಯುವ ಮೋರ್ಚಾ ನಾಯಕ ಅತುಲ್ ಲೋಖಂಡೆಯನ್ನು ತಕ್ಷಣವೆ ಆಸ್ಪತ್ರೆಗೆ ದಾಖಲಿಸಿದರೂ ಆತ ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದ.

ಲೋಖಂಡೆಯ ಕಿಡ್ನಿ ಮತ್ತು ಲಿವರ್‌ ಅನ್ನು ಭೋಪಾಲ್‌ ನ ಮೂರು ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು.ಕಣ್ಣುಗಳನ್ನು ಸರಕಾರದ ಹಮೀದಿಯಾ ಆಸ್ಪತ್ರೆಗೆ ರವಾನಿಸಲಾಯಿತು ಎಂದು ರಾಕೇಶ್‌ ತಿಳಿಸಿದರು.

“ನಾನು ಈಗ ಆವಳ ಮನೆಯಲ್ಲಿದ್ದೇನೆ. ಸತ್ತರೆ ನನ್ನನ್ನು ಇಲ್ಲಿಂದ ಆಚೆ ತೆಗೆದುಕೊಂಡು ಹೋಗಿ. ಬದುಕಿ ಉಳಿದರೆ ನಾನೆ ಸ್ವತಃ ಇಲ್ಲಿಗೆ ಮತ್ತೆ ಬರುವೆ” ಎಂದು ಫೇಸ್‌ಬುಕ್‍ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದ ಅತುಲ್ ಲೋಖಂಡೆ ಮತ್ತೆ ಪ್ರೇಯಸಿಯ ಬಳಿ ಬರದೆ ಪ್ರಾಣ ತೆತ್ತಿದ್ದಾರೆ.

Get real time updates directly on you device, subscribe now.