ರಾ. ಹೆದ್ದಾರಿ 66ರಲ್ಲಿ ಮತ್ತೆ ಭೀಕರ ಅಪಘಾತ: ಸ್ಥಳದಲ್ಲೆ ಐವರ ಸಾವು

: ಲಾರಿ ಹಾಗೂ ಟ್ರಾವೆಲರ್ ಜೀಪ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ. ಇತರ ಏಳು ಮಂದಿ ಗಾಯಗೊಂದ್ದಾರೆ.

ಕಾಸರಗೋಡು: ಲಾರಿ ಹಾಗೂ ಟ್ರಾವೆಲರ್ ಜೀಪ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ. ಇತರ ಏಳು ಮಂದಿ ಗಾಯಗೊಂದ್ದಾರೆ. ಈ ದುರ್ಘಟನೆ ಕಾಸರಗೋಡಿನ ಉಪ್ಪಳ ಸಮೀಪ ನಯಾ ಬಜಾರ್ ಬಳಿ ಸಂಭವಿಸಿದೆ.

ಮೃತರು ದಕ್ಷಿಣಕನ್ನಡ ಜಿಲ್ಲೆಯ ಕೆ.ಸಿ.ರೋಡ್ ನಿವಾಸಿಗಳಾದ ಅಸ್ಮಾ(30), ಬಿಫಾತಿಮ(65), ನಸೀಮಾ(38), ಮುಸ್ತಾಕ್ (41) ಹಾಗೂ ಇಮ್ತಿಯಾಜ್ (35) ಎಂದು ತಿಳಿದುಬಂದಿದೆ.

ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೀಪಿನಲ್ಲಿ ಮಕ್ಕಳು ಸೇರಿ ಸುಮಾರು 18 ಮಂದಿ ಪ್ರಯಾಣಿಸುತ್ತಿದ್ದರು,

ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

ಎರಡು ದಿನಗಳ ಹಿಂದಷ್ಟೆ ಕುಮಟಾದಲ್ಲಿ ನಡೆದ ಇನ್ನೊಂದು ಅಪಘಾತದಲ್ಲಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದರು.

Get real time updates directly on you device, subscribe now.