ನೂಡಲ್ಸ್ ತಿಂದ 9 ಮಕ್ಕಳು ಅಸ್ವಸ್ಥ: ನಮ್ಮ ಉತ್ಪನ್ನವಲ್ಲ ಎಂದ ನೆಸ್ಲೆ

ನೂಡಲ್ಸ್ ಖರೀದಿಸಿ ತಿಂದ ಒಂಬತ್ತು ಮಕ್ಕಳು ಅಸ್ವಸ್ಥರಾಗಿದ್ದು, ಅವರನ್ನು ಗ್ವಾಲಿಯರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಛತ್ತರ್ ಪುರ್: ನೂಡಲ್ಸ್ ಖರೀದಿಸಿ ತಿಂದ ಒಂಬತ್ತು ಮಕ್ಕಳು ಅಸ್ವಸ್ಥರಾಗಿದ್ದು, ಅವರನ್ನು ಗ್ವಾಲಿಯರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಐದು ರೂಪಾಯಿಯ ಎಂಟು ಮ್ಯಾಗಿ ನೂಡಲ್ಸ್ ಪ್ಯಾಕ್ ಗಳನ್ನು ಖರೀದಿಸಿದ ಮಕ್ಕಳು ಅವುಗಳನ್ನು ತಿಂದ ಬಳಿಕ ಅವರ ವರ್ತನೆ ಬದಲಾಗಿದ್ದು, ತೀವೃ ಅಸ್ವಸ್ಥರಾದರು ಎಂದು ಆರೋಪಿಸಲಾಗಿದೆ. ಆದರೆ ನೆಸ್ಲೆ ಇಂಡಿಯಾ ಸಂಸ್ಥೆ ಮಕ್ಕಳು ಖರೀದಿಸಿದ ಉತ್ಪನ್ನಗಳು ನೆಸ್ಲೆ ಸಂಸ್ಥೆಯದ್ದಲ್ಲ ಎಂದು ತನ್ನ ಮೇಲಿನ ಆರೋಪ ನಿರಾಕರಿಸಿದೆ.

ಮಕ್ಕಳು ಐದು ರೂ. ಬೆಲೆಯ ಮ್ಯಾಗಿ ನೂಡಲ್ಸ್ ಖರೀದಿಸಿದ್ದರು. ಅವುಗಳನ್ನು ತಿಂದು ಅಸ್ವಸ್ಥಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಒಯ್ಯಲಾಗಿತ್ತು. ಆದರೆ ಅಲ್ಲಿ ವೈದ್ಯರು ಇಲ್ಲದ ಕಾರಣ ಗ್ವಾಲಿಯರ್ ಮೆಡಿಕಲ್ ಕಾಲೇಜಿಗೆ ಮಕ್ಕಳನ್ನು ದಾಖಲಿಸಲಾಗಿದೆ ಎಂದು ಒಂದು ಮಗುವಿನ ತಂದೆ ರಾಮ್ ಕಿಶನ್ ಅವರು ಹೇಳಿದ್ದಾರೆ.

Get real time updates directly on you device, subscribe now.