ಲಂಡನ್ ಆಸ್ತಿ ಮುಟ್ಟುಗೋಲಿಗೆ ಮಲ್ಯ ಸಂಪೂರ್ಣ ಒಪ್ಪಿಗೆ! ಆದರೆ ಅಸಲಿ ವಿಷಯ ಏನು ಗೊತ್ತೆ?

ಉದ್ಯಮಿ ವಿಜಯ ಮಲ್ಯ ಈ ಬಾರಿ ಬ್ರಿಟನ್ ನ್ಯಾಯಾಲಯಕ್ಕೆ ಸೆಳ್ಳೆ ಹಣ್ಣು ತಿನ್ನಿಸುವದರಲ್ಲಿ ಸಫಲರಾಗಿದ್ದು ಹೇಗೆ?

ಬ್ರಿಟನ್ ನಲ್ಲಿರುವ ತನ್ನ ಸೊತ್ತುಗಳನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ನ್ಯಾಯಾಲಯದ ಜಾರಿ ಅಧಿಕಾರಿಗಳಿಗೆ ಸಂಪೂರ್ಣ ಒಪ್ಪಿಗೆ ಕೋಡುತ್ತೇನೆ ಎಂದು ಉದ್ಯಮಿ ವಿಜಯ ಮಲ್ಯ ನಗು ಚೆಲ್ಲಿದ್ದಾರೆ. ಅರೆರೆ… ಏನಿದು?

ಸಿಲ್ವರ್ ಸ್ಟೋನ್: ಬ್ರಿಟನ್ ನಲ್ಲಿರುವ ತನ್ನ ಸೊತ್ತುಗಳನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ನ್ಯಾಯಾಲಯದ ಜಾರಿ ಅಧಿಕಾರಿಗಳಿಗೆ ಸಂಪೂರ್ಣ ಒಪ್ಪಿಗೆ ಕೋಡುತ್ತೇನೆ ಎಂದು ಉದ್ಯಮಿ ವಿಜಯ ಮಲ್ಯ ನಗು ಚೆಲ್ಲಿದ್ದಾರೆ. ಅರೆರೆ… ಏನಿದು? ವಿಜಯ ಮಲ್ಯ ಬದಲಾಗಿ ಬಿಟ್ಟರಾ ಎಂದು ಅಚ್ಚರಿಪಟ್ಟಿದ್ದೀರಾ? ಇಲ್ಲ. ವಿಜಯ ಮಲ್ಯ ಬದಲಾಗಿಲ್ಲ ಎಂಬುದು ಅವರ ಮುಂದಿನ ಮಾತುಗಳಲ್ಲಿ ನಿಮಗೆ ತಿಳಿಯುತ್ತದೆ. ಹಾಗಾದರೆ ವಿಜಯ ಮಲ್ಯ ಹೇಳಿದ್ದಾದರೂ ಏನಂತೀರಾ?

ನೀವು ಬ್ರಿಟನ್ ನಲ್ಲಿರುವ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಿ. ಆದರೆ ಸದ್ಯ ಈ ವೈಭವೋಪೇತ ಬಂಗಲೆಗಳು ನನ್ನ ಹೆಸರಿನಲ್ಲಿ ಇಲ್ಲ ಮಾರಾಯ್ರೆ ಎಂದು ವಿಜಯ ಮಲ್ಯ ಹೇಳಿದ್ದಾರೆ.

ಫೋರ್ಸ್ ಇಂಡಿಯಾ ತಂಡ ಪರವಾಗಿ ಬ್ರಿಟಿಷ್ ಫಾರ್ಮುಲಾ1 ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ಹಾಜರಾಗಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತಾಡಿದ ಮಲ್ಯ ಅವರು ಬ್ರಿಟನ್ ನಲ್ಲಿರುವ ತನ್ನ ಹೆಸರಿನಲ್ಲಿರುವ ಸೊತ್ತನ್ನು ಅಧಿಕಾರಿಗಳಿಗೆ ನೀಡಲು ನನ್ನ ಸಂಪೂರ್ಣ ಸಹಮತಿ ಇದೆ. ಆದರೆ ಇಲ್ಲಿರುವ ಒಂದು ಮನೆ ನನ್ನ ಮಕ್ಕಳ ಹೆಸರಿನಲ್ಲಿದ್ದು, ಇನ್ನೊಂದು ತಾಯಿಯ ಹೆಸರಿನಲ್ಲಿ ಇದೆ. ಆದ್ದರಿಂದ ಅವುಗಳನ್ನು ಜಪ್ತಿ ಮಾಡಲು ಅನುಮತಿ ನೀಡಲು ನನಗೆ ಕಾನೂನುರೀತ್ಯ ಅಧಿಕಾರ ಇಲ್ಲ ಎಂದಿದ್ದಾರೆ.

ಬ್ರಿಟನ್ನಲ್ಲಿರುವ ವಿಜಯ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಬೇಕೆಂದು ಭಾರತ ಸರಕಾರವು ಬ್ರಿಟನ್ ದೇಶಕ್ಕೆ ಈಗಾಗಲೇ ಮನವಿ ಮಾಡಿದೆ. ಮಲ್ಯ ಸಾಲ ಮಾಡಿರುವ ಭಾರತೀಯ ಬ್ಯಾಂಕ್ ಗಳ ಗುಂಪು ಅವರ ವಿರುದ್ಧ ದೂರನ್ನು ದಾಖಲಿಸಿದೆ.

ಬ್ರಿಟನ್ ನ್ಯಾಯಾಲಯದಲ್ಲಿ ಈ ಪ್ರಕರಣದ ತೀರ್ಪು ಸೆಪ್ಟೆಂಬರ್ ಮೊದಲ ವಾರ ಹೊರಬರುವ ನಿರೀಕ್ಷೆ ಇದೆ. ಮೇಲ್ಮನವಿಗೆ ಜುಲೈ 31ಕೊನೆಯ ದಿನವಾಗಿದೆ.

Get real time updates directly on you device, subscribe now.