ಮಹಿಳೆಯರ ಕಣ್ಣಿಗೆ ಮೆಣಸಿನ ಪುಡಿ ಎರಚಿ ಚಿನ್ನಾಭರಣ ದರೋಡೆ

ಮನೆಮಂದಿಯ ಕಣ್ಣಿಗೆ ಮೆಣಸಿನ ಹುಡಿ ಎರಚಿ ಹತ್ತು ಪವನ್ ಚಿನ್ನಾಭರಣದೊಂದಿಗೆ ಪರಾರಿಯಾದ ಘಟನೆ

ಕಾಸರಗೋಡು: ಮನೆಮಂದಿಯ ಕಣ್ಣಿಗೆ ಮೆಣಸಿನ ಹುಡಿ ಎರಚಿ ಹತ್ತು ಪವನ್ ಚಿನ್ನಾಭರಣದೊಂದಿಗೆ ಪರಾರಿಯಾದ ಘಟನೆ ಬುಧವಾರ ಮುಂಜಾನೆ ಬದಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ನೆಲ್ಲಿಕಟ್ಟೆ ಚೂರಿತ್ತಡ್ಕ ಎಂಬಲ್ಲಿ ನಡೆದಿದೆ.

ದಿ. ಬೀರಾನ್ ಹಾಜಿ ಎಂಬವರ ಮನೆ ಕಿಟಕಿ ಮುರಿದು ನುಗ್ಗಿದ ದರೋಡೆಕೋರರು ಮಲಗಿದ್ದ ಬೀರನ್ ಅವರ ಪತ್ನಿ ಅಮಿನಾ(45) ಮತ್ತು ಸೊಸೆ ಮರಿಯಾಂಬಿ(24)ಯವರ ಕಣ್ಣಿಗೆ ಮೆಣಸಿನ ಹುಡಿ ಎರಚಿದ್ದರು. ಇವರ ಬೊಬ್ಬೆಯಿಂದ ಎಚ್ಚತ್ತ ಮಕ್ಕಳನ್ನೂ ಮಾರಕಾಯುಧ ತೋರಿಸಿ ಬೆದರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಗಾಯಗೊಂಡ ಅಮಿನಾ ಮತ್ತು ಮರಿಯಾಂಬಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮರಿಯಾಂಬಿ ಅವರ ಪತ್ನಿ ಗಲ್ಫ್ ನಲ್ಲಿ ಉದ್ಯೋಗಿ.

ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮುಂಜಾನೆ ಮೂರುವರೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.

Get real time updates directly on you device, subscribe now.