ಭಾರತೀಯ ಸೇನೆಯನ್ನು ‘ಮೋದಿ ಕಿ ಸೇನಾ’ ಎಂದ ಯೋಗಿ: ಸೌಕಾಪಡೆಯ ಮಾಜಿ ಮುಖ್ಯಸ್ಥರಿಂದ ದೂರು

ಸಶಸ್ತ್ರ ಪಡೆಯು ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲ ಎಂದು ರಾಮ್ ದಾಸ್ ಹೇಳಿದ್ದಾರೆ

ಯೋಗಿ ಆದಿತ್ಯನಾಥ್ ವಿರುದ್ಧ ನೌಕಾ ಸೇನೆ ಮಾಜಿ ಮುಖ್ಯಸ್ಥ ಅಡ್ಮಿರಲ್ ಎಲ್.ರಾಮ್‌ ದಾಸ್ ದೂರು

ನವದೆಹಲಿ: ಚುನಾವಣಾ ಪ್ರಚಾರದ ವೇಳೆ ಭಾರತೀಯ ಸೇನೆಯನ್ನು ಮೋದಿ ಕಿ ಸೇನಾ’ ಎಂದು ಕರೆದಿದ್ದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ನೌಕಾ ಸೇನೆ ಮಾಜಿ ಮುಖ್ಯಸ್ಥ ಅಡ್ಮಿರಲ್ ಎಲ್.ರಾಮ್‌ ದಾಸ್ ಅವರು ಚುನಾವಣೆ ಆಯೋಗಕ್ಕೆ ದೂರು ನೀಡಿದ್ದಾರೆ.

ಸಶಸ್ತ್ರ ಪಡೆಯು ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲ ಎಂದು ರಾಮ್ ದಾಸ್ ಹೇಳಿದ್ದಾರೆ. “ಸಶಸ್ತ್ರ ಪಡೆಯು ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷಕ್ಕೆ ಸೇರಿದ ಖಾಸಗಿ ಪಡೆ ಅಲ್ಲ. ಅದಕ್ಕೆ ತದ್ವಿರುದ್ಧವಾದ ಯಾವುದೇ ಅಭಿಪ್ರಾಯವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ಅವರು ಮುಖ್ಯ ಚುನಾವಣೆ ಆಯುಕ್ತ ಸುನೀಲ್ ಅರೋರಾ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಕಳೆದ ತಿಂಗಳು ಕೂಡ ಚುನಾವಣೆ ಆಯೋಗಕ್ಕೆ ರಾಮ್ ದಾಸ್ ಪತ್ರ ಬರೆದಿದ್ದರು. ಸಶಸ್ತ್ರ ಮೀಸಲು ಪಡೆಯು ರಾಜಕೀಯ ಪಕ್ಷಗಳಿಂದ ರಾಜಕೀಯಕ್ಕೆ ಬಳಕೆ ಆಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಅದೇ ರೀತಿ, ಚುನಾವಣೆ ಪ್ರಚಾರಕ್ಕಾಗಿ ಸೇನೆಯ ಚಿತ್ರಗಳನ್ನು ರಾಜಕೀಯ ಪಕ್ಷಗಳು ಬಳಸಿಕೊಳ್ಳಬಾರದು ಎಂದು ಅಧಿಸೂಚನೆ ಹೊರಡಿಸಿದ್ದನ್ನು ರಾಮ್ ದಾಸ್ ಮೆಚ್ಚಿಕೊಂಡಿದ್ದರು.

ಈ ಹೇಳಿಕೆಗೆ ಕಾಂಗ್ರೆಸ್ ಕೂಡ ಆಕ್ರೋಶ ವ್ಯಕ್ತಪಡಿಸಿತ್ತು. ಕಾಂಗ್ರೆಸ್ ವಕ್ತಾರರಾಅದ ಪ್ರಿಯಾಂಕ ಚತುರ್ವೇದಿ ಮಾತನಾಡಿ, ಭಾರತೀಯ ಸೇನೆಯನ್ನು ಮೋದಿ ಸೇನೆ ಎಂದು ಯೋಗಿ ಆದಿತ್ಯನಾಥ್ ಮರು ನಾಮಕರಣ ಮಾಡಿದ್ದಾರೆ. ಇದು ನಮ್ಮ ಸಶಸ್ತ್ರ ಸೇನೆಗೆ ಅವಮಾನ. ಅವರು ಭಾರತದ ಸಶಸ್ತ್ರ ಪಡೆ. ಪ್ರಚಾರ ಮಂತ್ರಿಯ ಖಾಸಗಿ ಸೇನೆಯಲ್ಲ. ಯೋಗಿ ಆದಿತ್ಯನಾಥ್ ಕಡ್ಡಾಯವಾಗಿ ಕ್ಷಮೆ ಕೇಳಬೇಕು ಎಂದಿದ್ದರು.

Get real time updates directly on you device, subscribe now.